Webdunia - Bharat's app for daily news and videos

Install App

ಹೆಬ್ಬುಲಿ ಬೆಡಗಿ ಅಮಲಾ ಪೌಲ್‌ಗೆ ಗಂಡು ಮಗು, ಅದ್ಧೂರಿಯಾಗಿ ಬರಮಾಡಿಕೊಂಡ ಕುಟುಂಬ

Sampriya
ಮಂಗಳವಾರ, 18 ಜೂನ್ 2024 (16:01 IST)
Photo Courtesy X
ಬೆಂಗಳೂರು: ಕನ್ನಡದ ಹೆಬ್ಬುಲಿ ಸಿನಿಮಾದಲ್ಲಿ ಸುದೀಪ್‌ಗೆ ನಾಯಕಿಯಾಗಿದ್ದ ನಟಿ ಅಮಲಾ ಪೌಲ್ ಮತ್ತು ಅವರ ಪತಿ ಜಗತ್ ದೇಸಾಯಿ ದಂಪತಿಗೆ ಗಂಡು ಮಗುವಾಗಿದೆ.

ದಂಪತಿಗಳು ತಮ್ಮ ಮಗ 'ಇಲೈ' ಅವರನ್ನು ಜೂನ್ 11, 2024 ರಂದು ಸ್ವಾಗತಿಸಿದರು ಮತ್ತು ಜೂನ್ 17 ರಂದು ತಮ್ಮ ಅಭಿಮಾನಿಗಳೊಂದಿಗೆ  ಹೃದಯಸ್ಪರ್ಶಿ ಸುದ್ದಿಯನ್ನು ಹಂಚಿಕೊಂಡರು.

ಅಮಲಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮಗುವನ್ನು ಮನೆಗೆ ಸ್ವಾಗತಿಸುತ್ತಿರುವ  ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲು ಅಮಲಾ ಹಾಗೂ ಜಗತ್ ದೇಸಾಯಿ ಅವರು ಮಗುವನ್ನು ಮುದ್ದಾಡುತ್ತಿರುವುದನ್ನು ಕಾಣಬಹುದು. ವಿಡಿಯೋದ ಶೀರ್ಷಿಕೆಯಲ್ಲಿ ಗಂಡು ಮಗುವಿನ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕನ್ನಡದ ಹೆಬ್ಬುಲಿಯಲ್ಲಿ ನಟಿಸಿದ ಅಮಲಾ ಅವರು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಅಮಲಾ ಪೌಲ್ ಮತ್ತು ಜಗತ್ ದೇಸಾಯಿ ಅವರು ನವೆಂಬರ್ 2023 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜಗತ್ ಗೋವಾದವರು ಮತ್ತು ರಾಜ್ಯದ ಜನಪ್ರಿಯ ಐಷಾರಾಮಿ ವಿಲ್ಲಾದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮಲಾ ಮೊದಲು ತಮಿಳು ನಿರ್ದೇಶಕ ಎಎಲ್ ವಿಜಯ್ ಅವರನ್ನು ಮದುವೆಯಾಗಿದ್ದರು, ಆದರೆ ಮೂರು ವರ್ಷಗಳ ನಂತರ ಇಬ್ಬರೂ ಬೇರೆಯಾದರು.

ದೈವ ತಿರುಮಗಳು, ವಿಐಪಿ ಮತ್ತು ರಾತ್ಸಾಸನ್‌ನಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಅಮಲಾ, ಕೊನೆಯದಾಗಿ ಪೃಥ್ವಿರಾಜ್ ಅವರ ಆಡುಜೀವಿತಂನಲ್ಲಿ ಕಾಣಿಸಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments