Daily Horoscope
✕

ದರ್ಶನ್ ಸರ್ ಈ ಕೆಲಸ ಮಾಡಿದ್ದಾರೆ ಎಂದರೆ ನನಗೆ ನಂಬಲಾಗುತ್ತಿಲ್ಲ: ಕೊನೆಗೂ ಮೌನ ಮುರಿದ ರಚಿತಾ ರಾಮ್

Krishnaveni K
ಮಂಗಳವಾರ, 18 ಜೂನ್ 2024 (15:40 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಅರೆಸ್ಟ್ ಆಗಿರುವ ಬಗ್ಗೆ ಕೊನೆಗೂ ನಟಿ ರಚಿತಾ ರಾಮ್ ಮೌನ ಮುರಿದಿದ್ದಾರೆ. ನನಗೆ ದರ್ಶನ್ ಸರ್ ಗುರು ಸಮಾನ, ಅವರು ಇಂತಹ ಕೆಲಸ ಮಾಡಿದ್ದಾರೆಂದರೆ ನಂಬಲಾಗುತ್ತಿಲ್ಲ ಎಂದಿದ್ದಾರೆ.

ರಚಿರಾ ರಾಮ್ ಗೆ ಇಂಡಸ್ಟ್ರಿಯಲ್ಲಿ ಒಂದು ಹೆಸರು ತಂದುಕೊಟ್ಟಿದ್ದೇ ದರ್ಶನ್. ಅವರಿಬ್ಬರ ಜೋಡಿ ಅಭಿಮಾನಿಗಳಿಗೆ ಎಂದೆಂದಿಗೂ ಫೇವರಿಟ್. ರಚಿತಾ ಕೂಡಾ ದರ್ಶನ್ ನನ್ನ ಗಾಡ್ ಫಾದರ್ ಎನ್ನುತ್ತಿರುತ್ತಾರೆ. ಆದರೆ ಇದುವರೆಗೆ ರಚಿತಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸದೇ ಇರುವುದು ಅನೇಕರಿಂದ ಟೀಕೆಗೊಳಗಾಗಿತ್ತು.

ಇದೀಗ ಕೊನೆಗೂ ರಚಿತಾ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ನೋಟ್ ನ್ನು ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೆಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ,ಅವರ ಕುಟುಂಬಕ್ಕೆ ಧರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆ ಗೆ ಕಾನೂನಾತ್ಮಕವಾದ ನ್ಯಾಯ ಸಿಗುತ್ತದೆ ಎಂದು ಭರವಸೆ ನನಗಿದೆ’ ಏಂದಿದ್ದಾರೆ.

ಅಲ್ಲದೆ ‘ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಕಷ್ಟವಾಗುತ್ತಿದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೆ ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್  ನ ವರದಿಯಲ್ಲಿ ಪಾರದರ್ಶಕವಾಗಿರುತ್ತಿರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತಿರಿ ಎಂದು ಆಶಿಸುತ್ತೇನೆ’ ಎಂದು ರಚಿತಾ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವೀಕೆಂಡ್‌ನಲ್ಲಿ 'ಪ್ರೇಮದ ಊರಲಿ' ಮ್ಯಾಜಿಕ್, ಟಿಕೆಟ್‌ಗಳೆಲ್ಲ ಸೋಲ್ಡ್ ಔಟ್: ಇದುವರೆಗೆ ಗಳಿಸಿದ್ದೆಷ್ಟು

Video: ಎಂಥಾ ಅಭಿಮಾನಿಗಳೂ ಇರ್ತಾರಪ್ಪಾ.. ಬರ್ತ್ ಡೇಗೆ ವಿಶ್ ಮಾಡಲು ಬಂದು ರಚಿತಾ ರಾಮ್ ಗೆ ಅಭಿಮಾನಿ ಹೀಗೆ ಮಾಡೋದಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

ಮುಂದಿನ ಸುದ್ದಿ
Show comments