Publish Date: Wed, 19 Jan 2022 (09:20 IST)
Updated Date: Wed, 19 Jan 2022 (09:34 IST)
ಹೈದರಾಬಾದ್: ಪುಷ್ಪ ಸಿನಿಮಾ ಸಕ್ಸಸ್ ಬಳಿಕ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಗೆ ಬಾಲಿವುಡ್ ನಲ್ಲೂ ಬೇಡಿಕೆ ಬಂದಿದೆ. ಇದೀಗ ಅವರ ಸೂಪರ್ ಹಿಟ್ ಸಿನಿಮಾ ಅಲವೈಕುಂಠಪುರಮುಲೊ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ.
ಹಿಂದಿ ಭಾಷೆಗೆ ಡಬ್ ಆಗಿರುವ ಸಿನಿಮಾ ಹೊಸದಾಗಿ ಥಿಯೇಟರ್ ನಲ್ಲಿಯೇ ರಿಲೀಸ್ ಆಗುತ್ತಿದೆ. ನಿನ್ನೆ ಇದರ ಟ್ರೈಲರ್ ನ್ನು ಬಿಡುಗಡೆ ಮಾಡಲಾಗಿದೆ.
ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವ ದಿನದಂದು ಚಿತ್ರ ಹಿಂದಿಯಲ್ಲಿ ತೆರೆ ಕಾಣುತ್ತಿದೆ. ಈ ಸಿನಿಮಾ ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ ಆಗಿತ್ತು. ಇದೀಗ ಹಿಂದಿಯಲ್ಲಿ ಥಿಯೇಟರ್ ನಲ್ಲಿಯೇ ರಿಲೀಸ್ ಆಗುತ್ತಿರುವುದು ವಿಶೇಷ.