Publish Date: Sat, 08 Aug 2020 (10:28 IST)
Updated Date: Sat, 08 Aug 2020 (10:30 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಅಲ್ಲು ಅರ್ಜುನ್ ಸಿನಿಮಾಗಳು ಯೂಟ್ಯೂಬ್ ನಲ್ಲಿ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಆದರೆ ಈ ನಡುವೆ ಅಲ್ಲುಅರ್ಜುನ್ ಕೆಲವು ಸಿನಿಮಾಗಳನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.
ನಟ ಅಲ್ಲು ಅರ್ಜುನ್ ಅಭಿನಯದ ಸರೈ ನೋಡು, ದುವ್ವಾಡ ಜಗನ್ನಾಥಂ ಸಿನಿಮಾಗಳು ಹಿಂದಿಗೆ ಡಬ್ ಆಗಿದ್ದು, ಅದು ಯುಟ್ಯೂಬ್ ನಲ್ಲಿ ಅತಿ ಹೆಚ್ಚು ವೀವ್ಸ್ ನ್ನು ಪಡೆದುಕೊಳ್ಳುವುದರ ಮೂಲಕ ದಾಖಲೆ ಸೃಷ್ಟಿಸಿತ್ತು.
ಆದರೆ ಇದೀಗ ಈ ಸಿನಿಮಾಗಳನ್ನು ಯುಟ್ಯೂಬ್ ನಿಂದ ಏಕಾಏಕಿ ಡಿಲೀಟ್ ಮಾಡಲಾಗಿದೆ. ಇದು ಅಲ್ಲು ಅರ್ಜುನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.