Publish Date: Sat, 03 Oct 2020 (22:16 IST)
Updated Date: Sat, 03 Oct 2020 (22:18 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಳಿಕ ಬಾಲಿವುಡ್ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ. ಒಂದೆಡೆ ನೆಪೋಟಿಸಂ ಮತ್ತೊಂದೆಡೆ ಡ್ರಗ್ ಲಿಂಕ್.
ಈ ನಡುವೆ ಬಾಲಿವುಡ್ ಹಿರಿಯ ನಟ ಅಕ್ಷಯ್ ಕುಮಾರ್ ತಮ್ಮ ಮೌನ ಮುರಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ನಟ ಅಕ್ಷಯ್ ಕುಮಾರ್, ಬಾಲಿವುಡ್ ನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಂದೇ ದೃಷ್ಟಿಯಿಂದ ನಿರ್ಣಯ ಮಾಡುವುದು ಸರಿಯಲ್ಲ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.
ಬಾಲಿವುಡ್ ಜಾಗತಿಕ ವೇದಿಕೆಗಳಲ್ಲಿ ಭಾರತದ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮೂಲಗಳಲ್ಲಿ ಒಂದಾಗಿದೆ ಎಂದಿರುವ ನಟ ಅಕ್ಷಯ್ ಕುಮಾರ್, ಇತರ ಯಾವುದೇ ಉದ್ಯಮದಂತೆಯೇ ಬಾಲಿವುಡ್‌ನಲ್ಲಿ ಮಾದಕವಸ್ತು ಬಳಕೆಯಂತಹ ಸಮಸ್ಯೆಗಳು ಇದ್ದರೂ, ಇಡೀ ಚಲನಚಿತ್ರೋದ್ಯಮವನ್ನು ಒಂದೇ ರೀತಿ ದೂಷಿಸುವುದು ಸರಿಯಲ್ಲ ಎಂದಿದ್ದಾರೆ.