Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ವಿರುದ್ಧ ಮಾಧ್ಯಮ ಚೇಷ್ಟೆ?

ಬಾಲಿವುಡ್ ನಟಿ ವಿರುದ್ಧ ಮಾಧ್ಯಮ ಚೇಷ್ಟೆ?
ಮುಂಬೈ , ಶನಿವಾರ, 3 ಅಕ್ಟೋಬರ್ 2020 (15:21 IST)
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿರುದ್ಧ ಮಾಧ್ಯಮಗಳು ಊಹಾಪೋಹಗಳ ವರದಿ ಪ್ರಕಟಿಸುತ್ತಾ ಚೇಷ್ಟೆ ನಡೆಸುತ್ತಿವೆ.

ಹೀಗಂತ, ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಊಹಾತ್ಮಕ ವರದಿಗಳು ಪ್ರಕಟಗೊಳ್ಳುತ್ತಿವೆ ಎಂದು ನಟಿ ಪರ ವಕೀಲ ಮನಶಿಂದೆ ಹೇಳಿದ್ದಾರೆ.

ಸುಶಾಂತ್ ಸಿಂಗ್ ಸಾವಿನ ಒಂದು ದಿನ ಮೊದಲು ಜೂನ್ 13 ರಂದು ಸುಶಾಂತ್ ಸಿಂಗ್ ರಜಪೂತ್ ಅವರನ್ನು ರಿಯಾ ಚಕ್ರವರ್ತಿ ಭೇಟಿಯಾಗಿದ್ದರು ಎಂದು ಮಾಧ್ಯಮಗಳ ಹೇಳಿಕೆ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರ ಬಂದಿದೆ.

ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರ ಹೇಳಿಕೆಯನ್ನು ತಾವು ಏಮ್ಸ್ ನಿಂದ ನೋಡಿದ್ದೇನೆ. ಅಧಿಕೃತ ಪತ್ರಿಕೆಗಳು ಮತ್ತು ವರದಿಯು ಏಮ್ಸ್ ಮತ್ತು ಸಿಬಿಐನಲ್ಲಿ ಮಾತ್ರ ಇದೆ. ತನಿಖೆ ಮುಗಿದ ನಂತರ ಅದನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗುತ್ತದೆ. ಸಿಬಿಐನ ಅಧಿಕೃತ ಆವೃತ್ತಿಯನ್ನು ನಾವು ಕಾಯುತ್ತಿದ್ದೇವೆ.

ಯಾವುದೇ ಸಂದರ್ಭದಲ್ಲೂ ಸತ್ಯವನ್ನು ಬದಲಾಯಿಸಲಾಗುವುದಿಲ್ಲ ಎಂದು ರಿಯಾ ಚಕ್ರವರ್ತಿ ಯಾವಾಗಲೂ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನಿನಲ್ಲೇ ಪತ್ನಿಗೆ ವಿಚಿತ್ರ ಶಾಕ್ ಕೊಟ್ಟ ಪತಿ