Publish Date: Fri, 02 Oct 2020 (22:36 IST)
Updated Date: Fri, 02 Oct 2020 (22:37 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ನ್ಯಾಯ ಕೋರಿ ಅಭಿಮಾನಿಗಳು ಉಪವಾಸ ಸತ್ಯಾಗ್ರಹದ ದಾರಿ ತುಳಿದಿದ್ದಾರೆ.
ನಟನ ಸ್ನೇಹಿತ ಗಣೇಶ್ ಹಿವಾರ್ಕರ್ ಮತ್ತು ಮಾಜಿ ವ್ಯವಸ್ಥಾಪಕ ಅಂಕಿತ್ ಆಚಾರ್ಯ ಅವರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೆಹಲಿಯ ಜಂತರ್ ಮಂತರ್ ನಲ್ಲಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು, ಸುಷಾಂತ್ ಅವರ ಅಭಿಮಾನಿಗಳು ನಟನ ಸಾವಿಗೆ ನ್ಯಾಯವನ್ನು ಕೋರಿ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.
ಸಿಬಿಐ ಈ ಪ್ರಕರಣವನ್ನು 302 (ಕೊಲೆ ಆರೋಪ) ಅಡಿಯಲ್ಲಿ ತನಿಖೆ ಮಾಡಬೇಕು ಮತ್ತು ಅವರು ಅದನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಬಾರದು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.