Publish Date: Wed, 21 Apr 2021 (09:54 IST)
Updated Date: Wed, 21 Apr 2021 (09:56 IST)
ಹೈದರಾಬಾದ್ : ನಂದಮೂರಿ ಬಾಲಕೃಷ್ಣ ಅವರ ಅಖಂಡ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಪ್ರೊಡಕ್ಷನ್ ಹೌಸ್, ದ್ವಾರಕಾ ಕ್ರಿಯೇಷನ್ಸ್ ನ ಅಧಿಕೃತ ವೈಟಿ ಚಾನೆಲ್ ನಲ್ಲಿ ಅಖಂಡ ಟೀಸರ್ ಒಂದು ವಾರದೊಳಗೆ 2.8 ಕೋಟಿ ವೀವ್ಸ್ ಅನ್ನು ಗಳಿಸಿದೆ.
ಆದರೆ ಕೊನಿಡೆಲಾ ಪ್ರೊಡಕ್ಷನ್ ಕಂಪೆನಿಯ ಚಾನೆಲ್ ನಲ್ಲಿ ಜನವರಿ 29ರಂದು ಬಿಡುಗಡೆಯಾದ ಚಿರಂಜೀವಿ ಅವರ ಆಚಾರ್ಯ ಚಿತ್ರ ಇದುವರೆಗೆ 1.9 ಕೋಟಿ ವೀವ್ಸ್ ಅನ್ನು ಪಡೆದಿದೆ. ಆ ಮೂಲಕ ಆಚಾರ್ಯ ಚಿತ್ರವನ್ನು ಅಖಂಡ ಚಿತ್ರ ಹಿಂದಿಕ್ಕಿದೆ ಎನ್ನಲಾಗಿದೆ.