Publish Date: Sun, 31 Jul 2022 (09:30 IST)
Updated Date: Sun, 31 Jul 2022 (09:31 IST)
ಚೆನ್ನೈ: ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ನಟನೆಯಲ್ಲಿ ಮಾತ್ರವಲ್ಲ, ಕ್ರೀಡೆಯಲ್ಲೂ ಚಾಂಪಿಯನ್. ಇದೀಗ ಅದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ತಮಿಳುನಾಡು ರೈಫಲ್ ಶೂಟಿಂಗ್ ಚಾಂಪಿಯನ್ ಶಿಪ್ ಕೂಟದಲ್ಲಿ ಅಜಿತ್ ಮತ್ತು ತಂಡ ನಾಲ್ಕು ಚಿನ್ನ ಮತ್ತು ಎರಡು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವತಃ ಅಜಿತ್ ಒಟ್ಟು ನಾಲ್ಕು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಯುರೋಪ್ ನಲ್ಲಿ ಬೈಕ್ ಟೂರ್ ನಡೆಸಿ ಸುದ್ದಿಯಾಗಿದ್ದ ಅಜಿತ್ ಈಗ ಶೂಟಿಂಗ್ ನಲ್ಲಿ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.