Publish Date: Sun, 31 Jul 2022 (08:30 IST)
Updated Date: Sun, 31 Jul 2022 (09:05 IST)
ಹೈದರಾಬಾದ್: ಥಿಯೇಟರ್, ಒಟಿಟಿಯಲ್ಲಿ ಬಿಗ್ ಫ್ಲಾಪ್ ಆದ ಚಿರಂಜೀವಿ, ರಾಮ್ ಚರಣ್ ತೇಜ್ ಅಭಿನಯದ ಆಚಾರ್ಯ ಸಿನಿಮಾಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಥಿಯೇಟರ್ ಮತ್ತು ಒಟಿಟಿಯಲ್ಲಿ ದೊಡ್ಡ ಹಿನ್ನಡೆ ಅನುಭವಿಸಿರುವ ಆಚಾರ್ಯ ಸಿನಿಮಾ ಟಿವಿ ರೈಟ್ಸ್ 15 ಕೋಟಿ ರೂ.ಗೆ ಜೆಮಿನಿ ಟಿವಿಗೆ ಮಾರಾಟವಾಗಿತ್ತು ಎನ್ನಲಾಗಿದೆ.
ಆದರೆ ಈಗ ಥಿಯೇಟರ್ ಮತ್ತು ಒಟಿಟಿಯಲ್ಲಿ ಲಾಸ್ ಆಗಿರುವುದರಿಂದ ಟಿವಿ ವಾಹಿನಿ ನಿಗದಿಯಾದಂತೆ 15 ಕೋಟಿ ರೂ. ನೀಡಲು ನಿರಾಕರಿಸುತ್ತಿದೆಯಂತೆ. ಬದಲಾಗಿ 7.5 ಕೋಟಿ ರೂ.ಗೆ ಟಿವಿ ರೈಟ್ಸ್ ಖರೀದಿ ಮಾಡುವುದಾಗಿ ಹೇಳಿದೆ ಎನ್ನಲಾಗಿದೆ. ಹೀಗಾಗಿ ಆಚಾರ್ಯ ಸಿನಿಮಾ ದೊಡ್ಡ ನಷ್ಟ ಅನುಭವಿಸಿದೆ.