Publish Date: Fri, 29 Jul 2022 (09:50 IST)
Updated Date: Fri, 29 Jul 2022 (09:59 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಅನನ್ಯಾ ಪಾಂಡೆ ಜೊತೆ ಭಾಗಿಯಾಗಿದ್ದ ವಿಜಯ್ ದೇವರಕೊಂಡಗೆ ರಶ್ಮಿಕಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ ಎಂಬ ಪ್ರಶ್ನೆ ಎದುರಾಗಿದೆ.
ಇದಕ್ಕೆ ವಿಜಯ್ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. ಅಲ್ಲದೆ, ನನ್ನ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಎಲ್ಲರಿಗೂ ಕೂಗಿ ಹೇಳುತ್ತೇನೆ. ಅಲ್ಲಿಯವರೆಗೆ ನನ್ನ ಫ್ಯಾನ್ಸ್ ಗೆ ನಿರಾಸೆ ಮಾಡಲ್ಲ ಎಂದಿದ್ದಾರೆ.
ರಶ್ಮಿಕಾ ಮತ್ತು ನಾನು ಜೊತೆಗೆ ಎರಡು ಸಿನಿಮಾ ಮಾಡಿದೆವು. ಆಗ ನಾವಿಬ್ಬರೂ ನಮ್ಮ ವೃತ್ತಿ ಜೀವನದ ಆರಂಭದ ಹಂತದಲ್ಲಿದ್ದೆವು. ಆಕೆ ಡಾರ್ಲಿಂಗ್, ಆಕೆಯನ್ನು ನಾನು ಆರಾಧಿಸುತ್ತೇನೆ. ನಾವು ನಿಜವಾಗಿಯೂ ಒಳ್ಳೆಯ ಸ್ನೇಹಿತರು. ನಾವು ಜೊತೆಗೆ ಸಿನಿಮಾ ಮಾಡಿ ಏಳು-ಬೀಳುಗಳನ್ನು ಕಂಡಿದ್ದೇವೆ. ಹೀಗಾಗಿ ನಮ್ಮ ನಡುವೆ ಉತ್ತಮ ಬಾಂಧವ್ಯವೇರ್ಪಟ್ಟಿದೆ. ನನ್ನ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಹೇಳಬೇಕೆಂದೆನಿಸಿದಾಗ ಎಲ್ಲರಿಗೂ ಕೂಗಿ ಹೇಳುತ್ತೇನೆ. ಅಲ್ಲಿಯವರೆಗೆ ನನ್ನ ಫ್ಯಾನ್ಸ್ ನಾನು ಸಿಂಗಲ್ ಎಂದುಕೊಂಡು ಆರಾಧಿಸಲಿ ಎಂದಿದ್ದಾರೆ.