Select Your Language

Notifications

webdunia
webdunia
webdunia
webdunia

ಗಾಳಿಪಟ 2 ಟ್ರೈಲರ್ ಇಂದು ಲಾಂಚ್

ಗಾಳಿಪಟ 2 ಟ್ರೈಲರ್ ಇಂದು ಲಾಂಚ್
ಬೆಂಗಳೂರು , ಭಾನುವಾರ, 31 ಜುಲೈ 2022 (08:20 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಗಾಳಿಪಟ 2 ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಲಿದೆ.

ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಅಭಿನಯಿಸುತ್ತಿರುವ ಸಿನಿಮಾ ಎಂದರೆ ಸಹಜವಾಗಿ ಅಭಿಮಾನಿಗಳಿಗೆ ಕುತೂಹಲವಿರುತ್ತದೆ. ಈಗಾಗಲೇ ಚಿತ್ರತಂಡ ಕ್ಯಾರೆಕ್ಟರ್ ಟೀಸರ್ ಹೊರಬಿಟ್ಟಿದೆ.

ಇದನ್ನು ನೋಡುತ್ತಿದ್ದರೆ ಪಕ್ಕಾ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್ ನ ಸಿನಿಮಾ ಎಂದು ಅರಿವಾಗುತ್ತದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿದ್ದು ಹಿಟ್ ಲಿಸ್ಟ್ ಸೇರಿಕೊಂಡಿವೆ. ಆಗಸ್ಟ್ 12 ರಂದು ಸಿನಿಮಾ ಥಿಯೇಟರ್ ಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾರನ್ನು ಡಾರ್ಲಿಂಗ್ ಎಂದ ವಿಜಯ್ ದೇವರಕೊಂಡ