Select Your Language

Notifications

webdunia
webdunia
webdunia
webdunia

ವಿಚ್ಛೇದನದ ಊಹಾಪೋಹಕ್ಕೆ ಅಂತ್ಯ ಹಾಡಿದ ಐಶ್ವರ್ಯಾ, ಅಭಿಷೇಕ್‌

Aishwarya Rai Abishek Bacchan Divorce Rumours, Abhishek with Aishwarya Bacchan, Aradhya Bacchan,

Sampriya

ಮುಂಬೈ , ಶನಿವಾರ, 21 ಡಿಸೆಂಬರ್ 2024 (15:33 IST)
Photo Courtesy X
ಮುಂಬೈನಲ್ಲಿ ಗುರುವಾರ ನಡೆದ ತಮ್ಮ ಪುತ್ರಿ ಆರಾಧ್ಯಳ ಶಾಲಾ ವಾರ್ಷಿಕೋತ್ಸವದಲ್ಲಿ ಮಗಳ ಪರ್ಫಾಮೆನ್ಸ್ ನೋಡಲು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಒಟ್ಟಿಗೆ ಬರುವ ಮೂಲಕ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು.  ಇದಕ್ಕೆ ಸಾಕ್ಷಿ ಎಂಬಂತೆ ಈ  ದಂಪತಿಗಳು ಸಾರ್ವಜನಿಕವಾಗಿ ಬೇರೆ ಬೇರೆಯಾಗು ಕಾಣಿಸಿಕೊಂಡ ವಿಡಿಯೋಗಳು ಮತ್ತಷ್ಟು ಪುಷ್ಟಿ ನೀಡುತ್ತಿದ್ದವು.  ಇದೀಗ ಮಗಳ ಕಾರ್ಯಕ್ರಮವನ್ನು ಐಶ್ವರ್ಯ ಪತಿ ಅಭಿಷೇಕ್ ಹಾಗೂ ಮಾವ ಅಮಿತಾಬ್ ಜತೆ ಎಂಜಾಯ್ ಮಾಡಿದ್ದಾರೆ.

17 ವರ್ಷಗಳ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ಈ ಜೋಡಿಯು ಈ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಫುಲ್ ಖುಷ್ ಆಗಿದೆ. ಈ ಮೂಲಕ ವಿಚ್ಛೇದನದ ವದಂತಿಗೆ ಉತ್ತರ ನೀಡಿದ್ದಾರೆ.

ಈಚೆಗೆ ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಐಶ್ವರ್ಯಾ ತಮ್ಮ ಮಗಳ ಜತೆ ಮಾತ್ರ ಫೋಟೋಗೆ ಪೋಸ್ ನೀಡಿದರು. ಇನ್ನೂ ಅಭಿಷೇಕ್ ಅವರು ತಂದೆ, ತಾಯಿ ಜತೆ ನಿಂತು ಪೋಸ್ ನೀಡಿದರು. ಇದರ ಬೆನ್ನಲ್ಲೇ ಈ ದಂಪತಿ ‌ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅದಲ್ಲದೆ ಕಳೆದ ತಿಂಗಳು ಮಗಳು ಆರಾಧ್ಯ ಹುಟ್ಟುಹಬ್ಬದಲ್ಲೂ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ. ಇದನ್ನು ನೋಡಿದವರು ಈ ಜೋಡಿ ದೂರವಾಗಿದ್ದಾರೆ ಎಂದಿದ್ದರು.

ಇದೀಗ ಎಲ್ಲ ಊಹಾಪೋಹಕ್ಕೆ ಈ ದಂಪತಿ ಉತ್ತರ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಥ ಆಗ್ತಿಲ್ಲ ಎನ್ನುತ್ತಲೇ ಸಿನಿಮಾ ನೋಡಿದ ಫ್ಯಾನ್ಸ್: ಯುಐ ಮೊದಲ ದಿನದ ಗಳಿಕೆ ಎಷ್ಟು