Select Your Language

Notifications

webdunia
webdunia
webdunia
webdunia

ನೀನೂ ಒಂದು ಮದುವೆಯಾದ ಹೆಣ್ಣಾ: ಐಂದ್ರಿತಾ ರೇಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದೇಕೆ

Aindrita Ray

Krishnaveni K

ಬೆಂಗಳೂರು , ಶುಕ್ರವಾರ, 20 ಸೆಪ್ಟಂಬರ್ 2024 (09:54 IST)
Photo Credit: Instagram
ಬೆಂಗಳೂರು: ನಟಿ ಐಂದ್ರಿತಾ ರೇ ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರು ಸಕ್ರಿಯರಾಗಿದ್ದು, ಅವರ ಒಂದು ಫೋಟೋಗೆ ನೆಟ್ಟಿಗರು ಇನ್ನಿಲ್ಲದಂತೆ ಟೀಕೆ ಮಾಡಿದ್ದಾರೆ.

ಐಂದ್ರಿತಾ ರೇ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ಪ್ರವಾಸದ ಫೋಟೋಗಳು, ಗ್ಲಾಮರಸ್ ಫೋಟೋಗಳು ಇಲ್ಲವೇ ತಮ್ಮ ಮುದ್ದು ಶ್ವಾನಗಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಈ ಬಾರಿ ಐಂದ್ರಿತಾ ಬಿಕಿನಿಯಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಕಡಲ ನೀರಿನ ಜೊತೆ ಬಿಕಿನಿ ಹಾಕಿಕೊಂಡು ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ಅವರ ಈ ಫೋಟೋ ನೋಡಿ ಕೆಲವರು ನೀವೂ ಒಂದು ಮದುವೆಯಾದ ಹುಡುಗೀನಾ? ಮೈ ಪೂರಾ ಕಾಣುವ ಇಂತಹ ಫೋಟೋ ಪ್ರದರ್ಶನ ಮಾಡುತ್ತೀರಲ್ಲಾ ಎಂದು ಟೀಕೆ ಮಾಡಿದ್ದಾರೆ.

ಮತ್ತೆ ಕೆಲವರು ನೀವು ತುಂಬಾ ಗ್ಲಾಮರಸ್ ಆಗಿದ್ದೀರಿ ಎಂದು ಹೊಗಳಿದ್ದಾರೆ. ಮತ್ತೊಬ್ಬರು ಒಬ್ಬ ಮಹಿಳೆಗೆ ತಾನು ಹಾಕಿಕೊಳ್ಳುವ ಡ್ರೆಸ್ ನಲ್ಲಿ ಕಂಫರ್ಟ್ ಆಗಿದ್ದೇನೆ ಎಂದರೆ ಆಕೆ ಸುಂದರವಾಗಿ ಕಾಣುತ್ತಾಳೆ. ಇಂತಹ ನೆಗೆಟಿವ್ ಕಾಮೆಂಟ್ ಗಳಿಗೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಮೇಡಂ ಎಂದು ಇನ್ನೊಬ್ಬ ಬಳಕೆದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿರೋ ಸೆಲೆಬ್ರಿಟಿಗಳು ಹೇಗಿರಬೇಕು ಎಂದು ಸೋನಲ್ ನೋಡಿ ಕಲಿಯಬೇಕು