Select Your Language

Notifications

webdunia
webdunia
webdunia
webdunia

ಪೊಲೀಸ್ ವಶದಲ್ಲಿರುವ ಜಾನಿ ಮಾಸ್ಟರ್‌ನ್ನು ಮಾತನಾಡಿಸಲು ಹೈಡ್ರಾಮಾ ಮಾಡಿದ ಪತ್ನಿ

Tollywood Choreographer Jani Master

Sampriya

ಹೈದರಾಬಾದ್ , ಗುರುವಾರ, 19 ಸೆಪ್ಟಂಬರ್ 2024 (18:06 IST)
ಆಂಧ್ರಪ್ರದೇಶ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರು ಖ್ಯಾತ ನೃತ ನಿರ್ದೇಶಕ ಜಾನಿ ಅವರನ್ನು ಭೇಟಿಯಾಗಲು ಪತ್ನಿ ಆಯೇಷಾ(ಅಲಿಯಾಸ್ ಸುಮಲತಾ)ಅವರು ನರಸಿಂಗಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದರು.

ಈ ವೇಳೆ ಅವರು ಮಾಧ್ಯಮದ ಮುಂದೆ ಆಕ್ರೋಶ ಹೊರಹಾಕಿದರು.

ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದ ಹಾಗೇ ಜಾನಿ ಮಾಸ್ಟರ್ ತಲೆಮರೆಸಿಕೊಂಡಿದ್ದರು. ಕೊನೆಗೂ ಪೊಲೀಸರು ಅವರನ್ನು ಗೋವಾದಲ್ಲಿ ವಶಕ್ಕೆ ಪಡೆದರು.  ಪತಿಯ ಬಂಧನವಾಗು‌ತ್ತಿದ್ದ ಹಾಗೇ ಆಯೇಷಾ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಗಂಡನ ಜತೆ ಮಾತನಾಡಲು ಅವಕಾಶ ನೀಡಿ ಎಂದು ಹೈಡ್ರಾಮಾ ಮಾಡಿದ್ದಾರೆ.


ಮಾಧ್ಯಮದವರು ಆರೋಪಗಳ ಬಗ್ಗೆ ಪ್ರಶ್ನಿಸಿದಾಗ, ಆಯೇಷಾ ಅಸಮಾಧಾನಗೊಂಡರು ಮತ್ತು ಕೋಪಗೊಂಡರು..

 ಮಹಿಳಾ ನೃತ್ಯ ಸಂಯೋಜಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ಜಾನಿ ಅವರನ್ನು ಬಂಧಿಸಲಾಯಿತು. 24 ಗಂಟೆಗಳ ಒಳಗೆ ಉಪ್ಪಲಪಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ತೆಲಂಗಾಣ ಅಧಿಕಾರಿಗಳಿಗೆ ಗೋವಾ ನ್ಯಾಯಾಲಯ ಟ್ರಾನ್ಸಿಟ್ ವಾರಂಟ್ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಈ ದಿಟ್ಟ ಹೆಜ್ಜೆಗೆ ನಟ ದುನಿಯಾ ವಿಜಯ್ ಫುಲ್ ಖುಷ್