Webdunia - Bharat's app for daily news and videos

Install App

ದಿಗಂತ್ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡಿದ ಪತ್ನಿ ಐಂದ್ರಿತಾ

Webdunia
ಬುಧವಾರ, 22 ಜೂನ್ 2022 (16:25 IST)
ಬೆಂಗಳೂರು: ಗೋವಾದಲ್ಲಿ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್ ಸದ್ಯದ ಆರೋಗ್ಯ ಸ್ಥಿತಿ ಗತಿ ಬಗ್ಗೆ ಇಂದು ಪತ್ನಿ, ನಟಿ ಐಂದ್ರಿತಾ ರೇ ಮಾಧ‍್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದಿಗಂತ್ ಚೇತರಿಸಿಕೊಳ್ಳುತ್ತಿದ್ದಾರೆ. ಗೋವಾದಿಂದ ಮೂರು ಕಿ.ಮೀ.ದೂರದಲ್ಲಿರುವ ರೆಸಾರ್ಟ್ ಗೆ ಹೋಗಿದ್ದೆವು. ನಿಮಗೆಲ್ಲಾ ಗೊತ್ತಿರುವ ಹಾಗೆ ದಿಗಂತ್ ಗೆ ಸಾಹಸ ಕ್ರೀಡೆಗಳೆಂದರೆ ಇಷ್ಟ. ಹಾಗೇ ಸಮ್ಮಸ್ ಶಾಟ್ ಹೊಡೆಯುವಾಗ ಸ್ವಲ್ಪ ಆಯತಪ್ಪಿ ಕುತ್ತಿಗೆಗೆ ಪೆಟ್ಟಾಗಿದೆ. ಬೆನ್ನುಲುಬಿಗೆ ಯಾವುದೇ ತೊಂದರೆಯಾಗಿಲ್ಲ. ತಕ್ಷಣವೇ ಅವರನ್ನು ಗೋವಾ ಸರ್ಕಾರದ ಸಹಾಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿದೆವು. ಇದಕ್ಕೆ ನಾನು ಅವರಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ.

ಕೆಲವೇ ಗಂಟೆಗಳಲ್ಲಿ ಆಪರೇಷನ್ ಮಾಡಬೇಕಿತ್ತು. ಹೀಗಾಗಿ ಏರ್ ಲಿಫ್ಟ್ ಮಾಡಿದೆವು. ಈಗ ಆಪರೇಷನ್ ಆಗಿದ್ದು, ದಿಗಂತ್ ಆರೋಗ್ಯವಾಗಿದ್ದಾರೆ. ಇವತ್ತು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈಗಾಗಲೇ ವೈದ್ಯರ ಬಳಿ ಇನ್ನೊಮ್ಮೆ ಸಮ್ಮಸ್ ಶಾಟ್ ಮಾಡಲು ರೆಡಿ ಎಂದಿದ್ದಾರಂತೆ. ನಿಮ್ಮೆಲ್ಲರ ಹಾರೈಕೆಯಿಂದ ಅವರು ಚೇತರಿಸಿಕೊಂಡಿದ್ದಾರೆ’ ಎಂದು ಐಂದ್ರಿತಾ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮದುವೆಯಾಗಿ ಇಷ್ಟು ದಿನಕ್ಕೆ ನಟಿ ರಶ್ಮಿ ಪ್ರಭಾಕರ್ ಕೊನೆಗೂ ಕೊಟ್ರು ಗುಡ್ ನ್ಯೂಸ್

ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಬೀಸಿದ ಸುಮಲತಾಗೆ ಮೊದಲು ಕನ್ನಡ ಕಲಿಯಿರಿ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments