Select Your Language

Notifications

webdunia
webdunia
webdunia
webdunia

ಪಾಂಡ್ಯ ಜತೆಗಿನ ವಿಚ್ಛೇಧನದ ವದಂತಿ ಬೆನ್ನಲ್ಲೇ ಗೆಳೆಯನ ಜತೆ ಕಾಣಿಸಿಕೊಂಡ ನತಾಶ

ಪಾಂಡ್ಯ ಜತೆಗಿನ ವಿಚ್ಛೇಧನದ ವದಂತಿ ಬೆನ್ನಲ್ಲೇ ಗೆಳೆಯನ ಜತೆ ಕಾಣಿಸಿಕೊಂಡ ನತಾಶ

sampriya

ಮುಂಬೈ , ಭಾನುವಾರ, 26 ಮೇ 2024 (10:44 IST)
Photo By X
ಮುಂಬೈ: ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಜತೆಗಿನ ವಿಚ್ಚೇದನದ ವದಂತಿ ಬೆನ್ನಲ್ಲೇ ಅವರ ಪತ್ನಿ ನತಾಶ ಅವರು ತಮ್ಮ ಗೆಳೆಯ ಅಲೆಕ್ಸ್‌ ಅಲೆಕ್ಸಾಂಡರ್‌ ಜತೆ ಕ್ಯಾಮಾರ ಕಣ್ಣಿಗೆ ಬಿದ್ದಿದ್ದಾರೆ.

ಸ್ನೇಹಿತ ಅಲೆಕ್ಸ್‌ ಜತೆ ಶನಿವಾರ ಮಧ್ಯಾಹ್ನ ಕಾಫಿ ಡೇಟ್‌ನಲ್ಲಿ ಕಾಣಿಸಿಕೊಂಡ ನತಾಶ ಅವರಲ್ಲಿ ಪಾಂಡ್ಯ ಜತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಪಾಪರಾಜಿಗಳು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು

ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಛೇದನದ ವದಂತಿಗಳ ನಡುವೆ ನತಾಶ ಅವರು ಸ್ನೇಹಿತನ ಜತೆ ಸುತ್ತಾಡುತ್ತಿರುವುದು ಮತ್ತಷ್ಟು ಊಹಾಪೋಹಕ್ಕೆ ಕಾರಣವಾಗಿದೆ. ಇನ್ನೂ ಅಲೆಕ್ಸ್‌ ಅವರು ನಟಿ ದಿಶಾ ಪಟಾನಿ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದರು ಎಂಬ ವದಂತಿ ಹರಿದಾಡಿತ್ತು.

ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಮತ್ತು ನತಾಶ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ನತಾಶಾ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಾರ್ದಿಕ್ ಪಾಂಡ್ಯನ ಉಪನಾಮವನ್ನು ಕೈಬಿಟ್ಟಿದ್ದಾಳೆ ಎಂದು ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಪೋಸ್ಟ್‌ನೊಂದಿಗೆ ಊಹಾಪೋಹಗಳು ಪ್ರಾರಂಭವಾದವು. ಇದಲ್ಲದೆ, ಎಕ್ಸ್‌ ಬಳಕೆದಾರನು ದಂಪತಿಗಳ ವಿಚ್ಛೇದನವನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ

ವಿಚ್ಛೇದನದ ವದಂತಿಯನ್ನು ನತಾಶ ಅಥವಾ ಹಾರ್ದಿಕ್ ಪಾಂಡ್ಯ ಅವರು ಇದುವರೆಗೂ ಸ್ಪಷ್ಟಪಡಿಸಿಲ್ಲ. ದಂಪತಿಯಿಂದ ಇನ್ನೂ ಅಧಿಕೃತ ದೃಢೀಕರಣವಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ನೆಲಕ್ಕೆ ನಮಸ್ಕರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆಯಿಟ್ಟ ನಟಿ ಅವ್ನೀತ್‌ ಕೌರ್‌ ನಡವಳಿಗೆ ಫಿದಾ ಆದ ನೆಟ್ಟಿಗರು