Select Your Language

Notifications

webdunia
webdunia
webdunia
webdunia

ನೆಲಕ್ಕೆ ನಮಸ್ಕರಿಸಿ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆಯಿಟ್ಟ ನಟಿ ಅವ್ನೀತ್‌ ಕೌರ್‌ ನಡವಳಿಗೆ ಫಿದಾ ಆದ ನೆಟ್ಟಿಗರು

actor Avneeth Kaur

sampriya

ಮುಂಬೈ , ಶನಿವಾರ, 25 ಮೇ 2024 (19:45 IST)
Photo By Instagram
ಮುಂಬೈ: ಬಾಲಿವುಡ್‌ ನಟಿ ಅವ್ನೀತ್ ಕೌರ್ ಅವರ ವೀಡಿಯೊಂದು ಸದ್ಯ ಸಾಮಾಜಿಕ ಹೆಚ್ಚು ಟ್ರೆಂಡ್ ಆಗುತ್ತಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನಟಿ ಅವ್ನೀತ್‌ ಅವರು 77 ನೇ ಕಾನ್‌  ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆಯುವುದನ್ನು ಕಾಣಬಹುದು.

ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವ್ನೀತ್  ಅವರು ಭಾರತೀಯ ಸಂಸ್ಕೃತಿಯಂತೆ ನೆಲಕ್ಕೆ ನಮಸ್ಕರಿಸಿ, ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆಯಿಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಈ ವಿಡಿಯೋವನ್ನು ಅವ್ನೀತ್‌ ಅವರು ತಮ್ಮ  ಇನ್‌ಸ್ಟಾಗ್ರಾಮ್‌ಗೆ ಹಂಚಿಕೊಂಡು, ನಾವು ಕಳೆದ ರಾತ್ರಿ ಕೇನ್ಸ್ ರೆಡ್ ಕಾರ್ಪೆಟ್‌ನಲ್ಲಿ ಇತಿಹಾಸವನ್ನು ರಚಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
 

ಕಾನ್‌ ರೆಡ್ ಕಾರ್ಪೆಟ್‌ನಿಂದ ಅವನೀತ್ ಅವರ ವೀಡಿಯೊ ವೈರಲ್ ಆದ ಕೂಡಲೇ, ನೆಟಿಜನ್‌ಗಳು ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿಧ ವಿಧವಾಗಿ ಕಮೆಂಟ್‌ ಮಾಡಿದ್ದಾರೆ.

ಒಬ್ಬರು ಕಮೆಂಟ್‌ ಮಾಡಿ, ನೀವು ಮೆಟ್ಟಿಲನ್ನು ಮುಟ್ಟಿದ ರೀತಿ ನಿಮ್ಮ ಗೌರವ ಮತ್ತು ಕೃತಜ್ಞತೆಯನ್ನು ತೋರಿಸಿದೆ,'ಎಂದು ಬರೆದುಕೊಂಡರೆ, ಮತ್ತೊಬ್ಬರು 'ಮೊದಲ ಹೆಜ್ಜೆಯ ಆ ನಮಸ್ಕಾರ ನನ್ನ ಹೃದಯವನ್ನು ಮುಟ್ಟಿತು'' ಎಂದು ಕಾಮೆಂಟ್ ಮಾಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ರಮೇಶ್‌ ರಾವ್‌ ಬರ್ತಡೇಗೆ ಸರ್ಪ್ರೈಸ್‌ ಕೊಟ್ಟ ʼಪುಪ್ಪಾ 2 ದಿ ರೂಲ್‌ʼ ಚಿತ್ರತಂಡ