Select Your Language

Notifications

webdunia
webdunia
webdunia
webdunia

ನಟ ರಮೇಶ್‌ ರಾವ್‌ ಬರ್ತಡೇಗೆ ಸರ್ಪ್ರೈಸ್‌ ಕೊಟ್ಟ ʼಪುಪ್ಪಾ 2 ದಿ ರೂಲ್‌ʼ ಚಿತ್ರತಂಡ

Ramesh Rao

sampriya

ಆಂಧ್ರಪ್ರದೇಶ , ಶನಿವಾರ, 25 ಮೇ 2024 (19:24 IST)
Photo By X
ಆಂಧ್ರಪ್ರದೇಶ: ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತಿರುವ ನಟ ರಮೇಶ್‌ ರಾವ್‌ ಅವರಿಗೆ ʼಪುಪ್ಪಾ 2 ದಿ ರೂಲ್‌ʼ ಚಿತ್ರತಂಡ ಬಿಗ್‌ ಸರ್ಪ್ರೈಸ್‌ ನೀಡಿದೆ.

ಚಿತ್ರತಂಡ ಅವರ ಫಸ್ಟ್‌ಲುಕ್‌ ಬಿಡುಗಡೆ ಮಾಡಿ ಶುಭಹಾರೈಕೆ ಮಾಡಿದೆ. ರಮೇಶ್‌ ಅವರ ಫಸ್ಟ್‌ ಲುಕ್‌ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್‌ಸ್ಟಾಗ್ರಾಂನಲ್ಲಿ ನಿರ್ಮಾಪಕರು ರಮೇಶ್‌ ರಾವ್‌ ಅವರ ಫಸ್ಟ್‌ ಲುಕ್‌ ಬಿಡುಗಡೆ ಮಾಡಿ  "ಪ್ರತಿ ಪಾತ್ರವನ್ನು ನಿರ್ವಹಿಸುವ ಡೈನಾಮಿಕ್ ನಟನಿಗೆ ಶುಭ ಹಾರೈಸುತ್ತೇನೆ. ರಮೇಶ್‌ ರಾವ್‌ ಅವರಿಗೆ ಜನ್ಮದಿನದ ಶುಭಾಶಯಗಳು. ಪುಪ್ಪಾ 2 ದಿ ರೂಲ್‌ ಸಿನಿಮಾದಲ್ಲ ಪ್ರಬಲ ರಾಜಕಾರಣಿ 'ಸಿದ್ದಪ್ಪ' ಅವರನ್ನು ಆಗಸ್ಟ್‌ ೧೫ರಂದು ವೀಕ್ಷಿಸಿʼ ಎಂದು ಬರೆದುಕೊಂಡಿದ್ದಾರೆ.  ಅಭಿಮಾನಿಗಳು ಕೂಡ ಜನಪ್ರಿಯ ನಟನಿಗೆ ಶುಭ ಹಾರೈಸಿದರು.

ರಮೇಶ್ ರಾವ್ ಅವರು ತೆಲುಗು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಜನಪ್ರಿಯ ನಟ. ಒಕ್ಕದುನ್ನಾಡು, ಮಗಧೀರ, ಸೀಮಾ ತಪಕೈ, ಪಿಳ್ಳ ಜಮೀನ್ದಾರ್, ಯಶೋದಾ, ಗುಂಟೂರು ಕಾರಮ್ ಭೀಮಾ ನಾಯಕ್ ಅವರ ಗಮನಾರ್ಹ ಕೃತಿಗಳು. ತೆಲುಗು ಅಲ್ಲದೆ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಪುಷ್ಪಾ ಅವರ ಮೊದಲ ಭಾಗದಲ್ಲಿ ರಮೇಶ್ ರಾವ್ ಅವರು ಸಂಸದ ಭೂಮಿರೆಡ್ಡಿ ಸಿದ್ದಪ್ಪ ನಾಯ್ಡು ಅವರ ಪಾತ್ರವನ್ನು ನಿರ್ವಹಿಸಿದರು, ಶ್ರೀನು ಅವರ ಬದಲಿಯಾಗಿ ಸಿಂಡಿಕೇಟ್ ನಿರ್ವಹಿಸಲು ಪುಷ್ಪಾ ಅವರನ್ನು ನೇಮಿಸಿದ ರಾಜಕಾರಣಿ.
 

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ಬೇಬಿ ಬಂಪ್‌ ಟ್ರೋಲ್‌ ಬೆನ್ನಲ್ಲೇ ಮಡದಿಯ ಮುದ್ದಾದ ಫೋಟೋ ಹಂಚಿದ ರಣವೀರ್‌ ಸಿಂಗ್‌