Webdunia - Bharat's app for daily news and videos

Install App

ಜೈಲು ಸೇರಿ 28ದಿನಗಳ ಬಳಿಕ ಸೂರ್ಯನ ಕಂಡು ನಿಟ್ಟುಸಿರು ಬಿಟ್ಟ ದರ್ಶನ್‌

Sampriya
ಬುಧವಾರ, 10 ಸೆಪ್ಟಂಬರ್ 2025 (18:24 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಕಠಿಣವಾದ ನಿಯಮದಿಂದ ದಾಸ ಸಂಕಷ್ಟ ಪಡುತ್ತಿದ್ದಾರೆ. ಈ ವಿಚಾರವನ್ನು ದರ್ಶನೇ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದರು. 

ಮಂಗಳವಾರ ಈ ವಿಚಾರವಾಗಿ ಕೋರ್ಟ್‌ನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡುವ ಬಗ್ಗೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ. ಇದರಿಂದ ದರ್ಶನ್ ಕೊಂಚಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ.

ಕೋಣೆಯಲ್ಲಿ ಸರಿಯಾದ ಹಾಸಿಗೆ, ದಿಂಬು ಇಲ್ಲದೆ ಜೈಲಲ್ಲಿ ತೊಂದರೆ ಅನುಭವಿಸುತ್ತಿದ್ದ ದರ್ಶನ್‌ಗೆ ಇದೀಗ ಕನಿಷ್ಠ ಸೌಲಭ್ಯ ನೀಡಲಾಗಿದೆ.  

ಹಾಗಾಗಿ ದರ್ಶನ್‌ಗೆ ಇಂದು ಎರಡು ಜಮ್ಖಾನ ಹಾಗೂ ಚಾಪೆ, ದಿಂಬನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ. ಮಂಗಳವಾರ ರಾತ್ರಿ ಕೇಂದ್ರ ಕಾರಾಗೃಹಕ್ಕೆ ಕೋರ್ಟ್ ಆದೇಶದ ಪ್ರತಿ ತಲುಪಿದ್ದು, ಅದರಂತೆ ದರ್ಶನ್‌ಗೆ ತನ್ನ ಸೆಲ್ ಮುಂದೆ ವಾಕಿಂಗ್ ಮಾಡಲು ಅವಕಾಶ ದೊರೆತಿದೆ. ಜೊತೆಗೆ ಎರಡು ಗಟ್ಟಿಯಾದ ಜಮ್ಖಾನ ಒಂದು ಚಾಪೆ ಜೊತೆಗೆ ತಲೆದಿಂಬು ನೀಡಿದ್ದಾರೆ ಜೈಲ್‌ನ ಅಧಿಕಾರಿಗಳು. 

ಇನ್ನೂ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಹಾಕಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ದರ್ಶನ್‌ಗೆ ಸ್ವಲ್ಪಮಟ್ಟಿಗೆ ರಿಲೀಫ್ ಎಂದೆ ಹೇಳಬಹುದು. ಇನ್ನು ದರ್ಶನ್ ಸೆಲ್‌ನಲ್ಲಿ ಇದ್ದು ಸೆಕ್ಯೂರಿಟಿ ಬ್ಯಾರಕ್‌ಗೆ ಶಿಫ್ಟ್ ಮಾಡುವ ವಿಚಾರವಾಗಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಾಮನ ಪಾತ್ರಕ್ಕೆ ಜೀವನಶೈಲಿಯನ್ನೇ ಬದಲಾಯಿಸಿಕೊಂಡ ರಣಬೀರ್ ಕಪೂರ್

ಅಪ್ಪು ಫೋಟೋ ಬರುತ್ತೆ ಗೋಳೋ ಅಂತ ಅಳ್ತಾರೆ: ಮದುವೆಯಾದ್ರೂ ಅನುಶ್ರೀಗೆ ತಪ್ಪಲಿಲ್ಲ ಟ್ರೋಲ್ ಕಾಟ

ಸೋತ ಘಾಟಿ, ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ ಅನುಷ್ಕಾ ಶೆಟ್ಟಿ

ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಕೊಟ್ಟ ಬಳಿಕವೂ ಡಿಕೆ ಶಿವಕುಮಾರ್ ಮರೆಯದ ಹಿರಿಯ ನಟಿಯರು

ಡಾ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಬೆನ್ನಲ್ಲೇ ಕುಟುಂಬಸ್ಥರಿಂದ ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments