Select Your Language

Notifications

webdunia
webdunia
webdunia
webdunia

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ನಟ ದರ್ಶನ್ ತೂಗುದೀಪ್‌

Sampriya

ಬೆಂಗಳೂರು , ಮಂಗಳವಾರ, 15 ಜುಲೈ 2025 (19:36 IST)
Photo Credit X
ನಟ ದರ್ಶನ್ ಅವರು ಇದೀಗ ಡೆವಿಲ್ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಈ ಹಾಡಿನ ಶೂಟ್‌ ಮುಗಿದರೆ ಡೆವಿಲ್ ಸಿನಿಮಾದ ಶೂಟಿಂಗ್ ಸಂಪೂರ್ಣ ಮುಗಿದ ಹಾಗೇ.  ಈ ಮಧ್ಯೆ ಸಿನಿಮಾ ತಂಡ ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದೆ

ದಿ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್‌ ಅನ್ನು ಶನಿವಾರದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.  

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ ದಿ ಡೆವಿಲ್ ಚಿತ್ರದ ಮೋಷನ್ ಪೋಸ್ಟರ್‌ ಇದೇ ಜುಲೈ 19ರ ಶನಿವಾರದಂದು ಸಂಜೆ 8 ಗಂಟೆಗೆ ನಮ್ಮ ಸೋಶಿಯಲ್ ಮೀಡಿಯಾ ಫೇಜ್ ಹಾಗೂ  ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್‌ಗಳ ಸಮ್ಮುಖದಲ್ಲೂ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ದರ್ಶನ್ ತೂಗುದೀಪ್ ಹಾಗೂ ಸಿನಿಮಾ ತಂಡ ಬರೆದುಕೊಂಡಿದೆ. 

ರೇಣುಕಾಸ್ವಾಮಿ ಪ್ರಕರಣದ ಬಳಿಕ ದರ್ಶನ್ ಅವರ ತೆರೆಮೇಲೆ ಬರುತ್ತಿರುವ ಮೊದಲ ಸಿನಿಮಾ ದಿ ಡೆವಿಲ್ ಆಗಿದೆ. ಷರತ್ತು ಬದ್ಧ ಜಾಮೀನು ಮೂಲಕ ಹೊರಬಂದಿರುವ ದರ್ಶನ್ ಅವರು ಸಿನಿಮಾದ ಚಿತ್ರೀಕರಣದಲ್ಲಿ ಸಂಪೂರ್ಣ ಭಾಗಿಯಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ