BB 12: ಕನ್ನಡ ಹಿರಿಯ ನಟಿ ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಸಾಧ್ಯತೆ

Sampriya
ಬುಧವಾರ, 10 ಸೆಪ್ಟಂಬರ್ 2025 (17:01 IST)
Photo Credit X
ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಶೋ ಕನ್ನಡ ಬಿಗ್‌ಬಾಸ್‌ 12 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಮನೆಗೆ ಎಂಟ್ರಿ ಕೊಡುವವರ ಸಂಭವನೀಯ ಪಟ್ಟಿ ಹರಿದಾಡುತ್ತಿದೆ. 

ಇದೀಗ ಕನ್ನಡ ಖ್ಯಾತ ಹಿರಿಯ ನಟಿಯೊಬ್ಬರು ಈ ಭಾರಿಯ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿಯಿದೆ. 

ಪ್ರತಿಭಾರಿಯೂ ಕಾರ್ಯಕ್ರಮ ಪ್ರಸಾರವಾಗೋದಕ್ಕೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್‌ ಆಗಿರುವ, ವಿವಾದಿತ ಹಾಗೂ ಕಿರುತೆರೆ ನಟ ನಟಿಯರ ಹೆಸರು ಬಹಿರಂಗವಾಗುವುದು ಸಾಮಾನ್ಯ. 

ಿದೀಗ ಸಾಮಾಜಿಕ ಜಾಲತಾಣದಲ್ಲಿ ನಟಿ ಸುಧಾರಾಣಿ ಅವರು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಖ್ಯಾತ ನಟಿ ಸುಧಾರಾಣಿ, ಸುದೀಪ್  ಜೊತೆಯೂ ನಟಿಸಿದ್ದ ನಟಿ, ಇವರು ಬಿಗ್‌ಬಾಸ್‌ಗೆ ಹೋಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅವರು ಅಭಿನಯಿಸುತ್ತಿದ್ದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿದಿದ್ದು, ಇದೀಗ ಅವರು ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುದೆ. 

ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿದ್ದು, ಹೆಚ್ಚು ಫಾಲವೋರ್ಸ್‌ ಹೊಂದಿರುವ ಹಿರಿಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಬಿಗ್‌ಬಾಸ್ ಸೀಸನ್ 12ರ ಹೈಲೈಟ್ ಕಂಟೆಸ್ಟಂಟ್‌ ಎನ್ನಲಾಗುತ್ತಿದೆ.

ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಸುಧಾರಾಣಿ ಅವರಿಗೂ ಬಿಗ್‌ಬಾಸ್‌ಗೆ ಆಹ್ವಾನ ಹೋಗಿದೆ ಎನ್ನಲಾಗಿದೆ. 

ಈ ವಿಚಾರವಾಗಿ ಸುಧಾರಾಣಿ ತಮ್ಮ ಇನ್‌ಸ್ಟಾಪೇಜ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. `ಯಾರ್ ಹೇಳಿದ್ದು’ ಎಂದು ಕೇಳಿ ಸಾಕ್ಷಿ ಕೇಳಿದ್ದಾರೆ. ಹೀಗಾಗಿ ಸುಧಾರಾಣಿ ಈ ಮಾತು ಸದ್ಯಕ್ಕೆ ಗೊಂದಲ ಸೃಷ್ಟಿಸಿದ್ದರೂ ಬಿಗ್‌ಬಾಸ್ ಮನೆಯಲ್ಲಿ ಸುಧಾರಾಣಿ ನೋಡುವ ಕುತೂಹಲವಂತೂ ಪ್ರೇಕ್ಷಕರಲ್ಲಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

Kurnool Bus Tragedy: ಆ ಜೀವಗಳು ಅದೆಷ್ಟೂ ನೋವು ಅನುಭವಿಸರಬೇಕು: ರಶ್ಮಿಕಾ ಮಂದಣ್ಣ ಕಂಬನಿ

BBK12: ಕಿಚ್ಚ ಸುದೀಪ್ ಹೇಳಿದ್ರೂಂತ ಡ್ರಾಮಾ ಮಾಡ್ತಿದ್ದಾರಾ ಅಶ್ವಿನಿ, ಜಾನ್ವಿ

ಮುಂದಿನ ಸುದ್ದಿ
Show comments