Select Your Language

Notifications

webdunia
webdunia
webdunia
webdunia

ಬ್ರಹ್ಮಚಾರಿಗೆ ಜೋಡಿಯಾದ ಅದಿತಿ ಫುಲ್ ಖುಷ್!

ಬ್ರಹ್ಮಚಾರಿಗೆ ಜೋಡಿಯಾದ ಅದಿತಿ ಫುಲ್ ಖುಷ್!
ಬೆಂಗಳೂರು , ಗುರುವಾರ, 28 ನವೆಂಬರ್ 2019 (14:33 IST)
ಸದಾ ಹೊಸತನದ ಪಾತ್ರಗಳನ್ನೇ ಅರಸುತ್ತಾ ಅಂಥಾದ್ದನ್ನೇ ಪಡೆದುಕೊಳ್ಳುತ್ತಾ ಸಾಗುತ್ತಿರೋ ನಟಿ ಅದಿತಿ ಪ್ರಭುದೇವ. ರಂಗನಾಯಕಿಯಾಗಿ ಅಭಿನಯಿಸಿ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿರುವ ಅದಿತಿ ಪ್ರಭುದೇವ ಇದೀಗ ಬ್ರಹ್ಮಚಾರಿಯ ಮಡದಿಯಾಗಿ ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದ್ದಾರೆ.

ಅದಿತಿ ಇದುವರೆಗೂ ಒಂದಷ್ಟು ಥರದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಾವುದೇ ಕಥೆಗಳು ಬಂದಾಗಲೂ ಅಲ್ಲಿ ತನ್ನ ಪಾತ್ರದಲ್ಲೆಷ್ಟು ಹೊಸತನವಿದೆ ಅನ್ನೋದನ್ನು ಪ್ರಧಾನವಾಗಿ ಗಮನಿಸುವ ಅದಿತಿಗೆ ಚಂದ್ರ ಮೋಹನ್ ಹೇಳಿದ ಇಡೀ ಕಥೆ ಮನೋರಂಜನೆಯ ದೃಷ್ಟಿಯಿಂದ ಇಷ್ಟವಾಗಿ ಬಿಟ್ಟಿತ್ತಂತೆ.
webdunia
ಉದಯ್ ಕೆ ಮೆಹ್ತಾ ನಿರ್ಮಾಣದ ಈ ಚಿತ್ರದಲ್ಲಿ ಅದಿತಿ ಬ್ರಹ್ಮಚಾರಿಯ ಹೆಂಡತಿಯಾಗಿ ನಟಿಸಿದ್ದಾರೆ. ಫಸ್ಟ್ ನೈಟ್ ಟೀಸರ್. ಟ್ರೇಲರ್ ಮತ್ತು ಹಾಡುಗಳಲ್ಲಿ ಅದಿತಿ ಈಗಾಗಲೇ ಮಿಂಚಿದ್ದಾರೆ. ಅವರ ಪಾತ್ರ ಏನಿರಬಹುದೆಂಬ ಅಂದಾಜು ಸಹ ಪ್ರೇಕ್ಷಕರಿಗೆ ಸಿಕ್ಕಿದೆ. ಆದರೆ ಇಷ್ಟು ಸಮಯದಲ್ಲಿ ಜಾಹೀರಾಗಿರೋದು ಅವರ ಪಾತ್ರದ ಒಂದು ಚಹರೆ ಮಾತ್ರ. ಚಿತ್ರದಲ್ಲಿ ನೀವು ಕಲ್ಪನೆ ಮಾಡಿಕೊಳ್ಳಲಾಗದಂಥಾ ಶೇಡುಗಳಲ್ಲಿ ಅದಿತಿ ಪಾತ್ರ ಮುಂದುವರೆಯುತ್ತದೆ ಮತ್ತದು ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆಯಂತೆ. ಖುದ್ದು ಅದಿತಿ ಅವರೇ ಈ ಸಿನಿಮಾದ ಬಗ್ಗೆ ಭರವಸೆ ಹೊಂದಿದ್ದಾರೆ. ಜನ ತನ್ನನ್ನು ಈ ಪಾತ್ರದಲ್ಲಿ ಹೇಗೆ ರಿಸೀವ್ ಮಾಡಿಕೊಳ್ಳುತ್ತಾರೆಂಬ ಬಗ್ಗೆ ಕುತೂಹಲ ಹೊಂದಿದ್ದಾರೆ. ಅದೆಲ್ಲವೂ 29ನೇ ತಾರೀಕು ಅಂದರೆ ಈ ವಾರವೇ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮಚಾರಿಯ ಕಥೆಯ ಸೂತ್ರಧಾರಿ ಉದಯ್ ಮೆಹ್ತಾ!