Select Your Language

Notifications

webdunia
webdunia
webdunia
webdunia

ಬ್ರಹ್ಮಚಾರಿಯ ಕಥೆಯ ಸೂತ್ರಧಾರಿ ಉದಯ್ ಮೆಹ್ತಾ!

ಬ್ರಹ್ಮಚಾರಿಯ ಕಥೆಯ ಸೂತ್ರಧಾರಿ ಉದಯ್ ಮೆಹ್ತಾ!
ಬೆಂಗಳೂರು , ಗುರುವಾರ, 28 ನವೆಂಬರ್ 2019 (14:29 IST)
ವ್ಯವಹಾರ, ವ್ಯಾಪಾರಗಳನ್ನು ಮೀರಿಕೊಂಡು ಸಿನಿಮಾವನ್ನು ಪ್ರೀತಿಸುವ, ಆರಾಧಿಸುವ ನಿರ್ಮಾಪಕರ ಸಂಖ್ಯೆ ಕಡಿಮೆಯಿದೆ. ಅಂಥಾ ಸದಭಿರುಚಿಯ ನಿರ್ಮಾಪಕರ ಸಾಲಿನಲ್ಲಿ ಉದಯ್ ಕೆ ಮೆಹ್ತಾ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಸಿನಿಮಾ ನಿರ್ಮಾಣಕ್ಕಿಳಿದರೆ ಕಾಸು ಹೂಡಿ ಸುಮ್ಮನೆ ಕೂತುಕೊಳ್ಳೋದು ಉದಯ್ ಮೆಹ್ತಾರ ಜಾಯಮಾನವಲ್ಲ.

ಅವರು ಪ್ರತೀ ಸನ್ನಿವೇಷ, ಪಲ್ಲಟಗಳನ್ನೂ ಜೊತೆಗಿದ್ದೇ ಗಮನಿಸುತ್ತಾರೆ. ಯಶಸ್ವೀ ಸಿನಿಮಾದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವ ಮೆಹ್ತಾ, ಕಥೆಯ ಆಯ್ಕೆಯಲ್ಲಿಯೂ ಭಿನ್ನ ಅಭಿರುಚಿ ಹೊಂದಿರುವವರು.
webdunia
ಬ್ರಹ್ಮಚಾರಿ ಚಿತ್ರದ ಒಂದೆಳೆಯನ್ನು ಆರಂಭಿಕವಾಗಿ ನಿರ್ದೇಶಕರಿಗೆ ಹೇಳಿದ್ದದ್ದೂ ಸಹ ಉದಯ್ ಮೆಹ್ತಾ ಅವರೇ ಅಂತೆ. ಹಾಗೆ ಸಿಕ್ಕ ಕಥಾ ಎಳೆಯನ್ನು ಹಾಸ್ಯಪ್ರಧಾನವಾಗಿ ನಿರ್ದೇಶಕ ಚಂದ್ರಮೋಹನ್ ವಿಸ್ತರಿಸಿದ್ದ ರೀತಿ ಕಂಡು ಉದಯ್ ಅವರೇ ಖುಷಿಗೊಂಡಿದ್ದರಂತೆ. ಚಂದ್ರಮೋಹನ್ ಅವರಿಗೂ ಒಂದು ಕಥೆಯನ್ನು ಸಂಪೂರ್ಣವಾಗಿ ಹಾಸ್ಯದ ಧಾಟಿಯಲ್ಲಿ ಪ್ರೇಕ್ಷಕರತ್ತ ದಾಟಿಸುವ ಕಲೆ ಸಿದ್ಧಿಸಿದೆ. ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್ ಸಿನಿಮಾಗಳ ಮೂಲಕ ಅವರು ಈ ಧಾಟಿಯಲ್ಲಿಯೇ ಗೆದ್ದಿದ್ದಾರೆ. ಆದರೆ ಖುದ್ದು ಅವರೇ ಬ್ರಹ್ಮಚಾರಿ ತಮ್ಮ ವೃತ್ತಿ ಬದುಕಿನ ಮಹತ್ತರ ಚಿತ್ರವಾಗಲಿದೆ ಎಂಬ ಭರವಸೆ ಹೊಂದಿದ್ದಾರೆ.
webdunia
ಬ್ರಹ್ಮಚಾರಿ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ಟ್ರೇಲರ್ ಮತ್ತು ಟೀಸರ್ಗಳಲ್ಲಿನ ದೃಷ್ಯಾವಳಿಗಳನ್ನು ನೋಡಿ ಇದು ಡಬಲ್ ಮೀನಿಂಗ್ ಡೈಲಾಗುಗಳನ್ನು ಹೊಂದಿರೋ ಚಿತ್ರ ಅಂದುಕೊಳ್ಳಬೇಕಿಲ್ಲ. ಒಂದೇ ಒಂದು ಸೀನಿನಲ್ಲಿಯೂ ವಲ್ಗರ್ ಅನ್ನಿಸದಂತೆ ಹಾಸ್ಯಕ್ಕೆ ಬದ್ಧವಾಗಿ ಈ ಚಿತ್ರವನ್ನು ರೂಪಿಸಲಾಗಿದೆ. ಕುಟುಂಬ ಸಮೇತರಾಗಿ ಕೂತು ನೋಡಿ ಭಜರ್ಧರಿ ಮನರಂಜನೆ ಪಡೆಯುವಂತೆ ಬ್ರಹ್ಮಚಾರಿ ಚಿತ್ರ ರೂಪುಗೊಂಡಿದೆ. ಈಗಾಗಲೇ ಯಾವ್ಯಾವ ರೀತಿಯಲ್ಲಿ ಈ ಸಿನಿಮಾದತ್ತ ಕ್ರೇಜ್ ಸೃಷ್ಟಿಯಾಗಿದೆಯೋ ಅದನ್ನೂ ಮೀರಿಸುವಂಥಾ ಗಟ್ಟಿ ಕಂಟೆಂಟಿನೊಂದಿಗೆ ಬ್ರಹ್ಮಚಾರಿ ಲಕ ಲಕಿಸಿದ್ದಾನೆ. ಅದರ ಅಸಲೀ ಸ್ವರೂಪ ಈ ವಾರ ಎಲ್ಲರೆದುರು ಅನಾವರಣಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮಚಾರಿಯನ್ನು ಕಾಡುತ್ತಿರೋದು ಯಾವ ಬಾಧೆ?