ಯಾವಾಗಲು ಒಂದಲ್ಲ ಒಂದು ಸುದ್ದಿಯಲ್ಲಿರುವ ನಟಿ ವನಿತಾ ವಿಜಯ್ ಕುಮಾರ್ ಅವರು ಇದೀಗ ನಾಲ್ಕನೇ ಮದುವೆಗೆ ಸಜ್ಜಾಗಿದ್ದಾರೆ.
43ವರ್ಷ ವಯಸ್ಸಿನ ವಿಜಯ್ ಕುಮಾರ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿ ವಿಚ್ಛೇಧನ ಪಡೆದಿದ್ದಾರೆ.
ಹಳೆ ಗೆಳೆಯ ರಾಬರ್ಟ್‌ಗೆ ವನಿತಾ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದು, ಈ ಫೋಟೋವನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ.
ಕಡಲ ತೀರದಲ್ಲಿ ವನಿತಾ ವಿಜಯ್ಕುಮಾರ್ ಅವರು ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್ ಅವರು ನಗು ಬೀರಿದ್ದಾರೆ. 'ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್ 2024. ವನಿತಾ ವಿಜಯ್ ಕುಮಾರ್ ಲವ್ಸ್ ರಾಬರ್ಟ್' ಎಂದು ಬರೆದುಕೊಂಡಿದ್ದಾರೆ.
ವನಿತಾ ವಿಜಯ್ಕುಮಾರ್ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. 7ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ ವನಿತಾ ಅವರು 2007ರಲ್ಲಿ ರಾಜನ್ ಆನಂದ್ ಎಂಬವರ ಜತೆ ಎರಡನೇ ಮದುವೆಯಾದರು. ಆ ವಿವಾಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಈ ಮದುವೆ ಕೂಡ ಮುರಿದುಬಿತ್ತು. 2020ರಲ್ಲಿ ಪೀಟರ್ ಪೌಲ್ ಜೊತೆ ವನಿತಾ ಅವರು 3ನೇ ಮದುವೆಯಾದರು. ಆದರೆ ಈ ದಾಂಪತ್ಯ ಜೀವನ ಕೂಡಾ ಹೆಚ್ಚು ದಿನ ಸಾಗಲಿಲ್ಲ. ಇದೀಗ ಕೋರಿಯೋಗ್ರಾಫರ್ ರಾಬರ್ಟ್ ಜತೆ ವನಿತಾ ಅವರು ಇದೇ 5ರಂದು ಮದುವೆಯಾಗುವ ಸಾಧ್ಯತೆಯಿದೆ. ಇದು ಪ್ರಚಾರದ ಗಿಮಿಕ್ ಕೂಡ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.