Select Your Language

Notifications

webdunia
webdunia
webdunia
webdunia

ವೀರೇಂದ್ರ ಹೆಗ್ಗಡೆಗೆ ರಾಖಿ ಕಟ್ಟಿದ ನಟಿ ಶ್ರುತಿಗೆ ನೀವೆಲ್ಲಾ ಯಾವಾಗ ಬುದ್ಧಿ ಕಲಿತೀರೋ ಎಂದ ನೆಟ್ಟಿಗರು

Shruthi

Sampriya

ಬೆಂಗಳೂರು , ಮಂಗಳವಾರ, 20 ಆಗಸ್ಟ್ 2024 (14:56 IST)
Photo Courtesy X
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಶ್ರುತಿ ಅವರು ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನದ ಬಳಿಕ ಶ್ರುತಿ ಅವರು ಧರ್ಮಾಧೀಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಶ್ರುತಿ ಅವರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದರು.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ರಾಖಿ ಕಟ್ಟುವ ಫೋಟೋವನ್ನು ಶ್ರುತಿ ಅವರು ಹಂಚಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗು ಪೂಜ್ಯರ ಆಶೀರ್ವಾದ ಪಡೆದು, ನೆನ್ನೆ ರಕ್ಷಾ ಬಂಧನದ ದಿನ ಅವರಿಗೆ ರಾಕೀ ಕಟ್ಟಿ ಆಶೀರ್ವಾದ ಪಡೆದ ನಾವು ಧನ್ಯ,  ಶ್ರೀ ಮಂಜುನಾಥ್ ನಿಮ್ಮಲರಿಗೂ ಒಳ್ಳೇದು ಮಾಡಲಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಈ ಪೋಸ್ಟ್‌ಗೆ ನೆಟ್ಟಿಗರು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬರು ನೀವೇ ಧನ್ಯರು ಎಂದು ಹೇಳಿದರೆ, ಮತ್ತೊಬ್ಬರು ಧರ್ಮಸ್ಥಳದಲ್ಲಿ ಆಗಿರೋ ಕೊಲೆ ಅತ್ಯಾಚಾರ ಬಗ್ಗೆ ಗೊತ್ತಿಲ್ವ ಮೇಡಂ ಯಾವಾಗ ಬುದ್ದಿ ಬರುತ್ತೋ ನಿಮಗೆಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೂ ಸೋಮವಾರ ದೇಶದಾದ್ಯಂತ ಅಣ್ಣ ತಂಗಿಯರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ತೆರೆಯ ಮೇಲೆ ಬರಲಿದೆ ಸಿಕ್ಸರ್‌ಗಳ​ ಸರದಾರ ಯುವರಾಜ್‌ ಸಿಂಗ್‌ ಜೀವನಾಧಾರಿತ ಸಿನಿಮಾ