Select Your Language

Notifications

webdunia
webdunia
webdunia
webdunia

ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಯಾವ ತನಿಖೆಗೂ ಸಿದ್ದ

investigation
ಧರ್ಮಸ್ಥಳ , ಸೋಮವಾರ, 30 ಅಕ್ಟೋಬರ್ 2023 (15:00 IST)
ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣದಲ್ಲಿ ನಾವು ಯಾವುದೇ ರೀತಿಯ ತನಿಖೆಗೆ ಸಿದ್ದರಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. 
 
 ಧರ್ಮ ಸಂರಕ್ಷಣಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರದ ಕುರಿತು ಯಾವುದೇ ದಾಖಲೆಯಿಲ್ಲದೇ ಆರೋಪ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಧರ್ಮಸ್ಥಳಕ್ಕೆ ಆರೋಪ ಬಂದಾಗ ಜನರು ಮಾಡಿದ ಪ್ರಾರ್ಥನೆಯನ್ನೇ ದೇವರ ಪಾದಕ್ಕೆ ಅರ್ಪಿಸುವುದಾಗಿ ಹೇಳಿದ ವೀರೇಂದ್ರ ಹೆಗ್ಗಡೆ, ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ಧರ್ಮಸೈನಿಕರಾದ ಭಕ್ತರು ಶಿಷ್ಟ ರಕ್ಷಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು. 
 
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಬಿಡುಗಡೆ ಮಾಡಲಾಗಿತ್ತು. ಇದೇ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಫುಡ್ ಡೆಲವರಿ ಮಾಡಲು ಬಂದಿದ್ದವನಿಂದ ಅತ್ಯಾಚಾರ:ಗುಂಡು ಹಾರಿಸಿ ಅರೆಸ್ಟ್‌