Select Your Language

Notifications

webdunia
webdunia
webdunia
webdunia

ತೆರೆಯ ಮೇಲೆ ಬರಲಿದೆ ಸಿಕ್ಸರ್‌ಗಳ​ ಸರದಾರ ಯುವರಾಜ್‌ ಸಿಂಗ್‌ ಜೀವನಾಧಾರಿತ ಸಿನಿಮಾ

ತೆರೆಯ ಮೇಲೆ ಬರಲಿದೆ ಸಿಕ್ಸರ್‌ಗಳ​ ಸರದಾರ ಯುವರಾಜ್‌ ಸಿಂಗ್‌ ಜೀವನಾಧಾರಿತ ಸಿನಿಮಾ

Sampriya

ಮುಂಬೈ , ಮಂಗಳವಾರ, 20 ಆಗಸ್ಟ್ 2024 (14:18 IST)
Photo Courtesy X
ಮುಂಬೈ: ಟೀಂ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್​ ಚಿತ್ರದಂತೆಯೇ ಇದೀಗ ಯುವರಾಜ್ ಸಿಂಗ್‌ ಜೀವನಾಧಾರಿತವು ಚಿತ್ರವಾಗಿ ಮೂಡಿಬರಲು ಸಜ್ಜಾಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸಿಕ್ಸರ್‌ ಸರದಾರನ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಜಾಲತಾಣಗಳಲ್ಲಿ ಭಾರೀ ಸಂತಸವನ್ನು ವ್ಯಕ್ತಪಡಿಸಿದೆ.

ಧೋನಿ ಅವರ ಬಯೋಪಿಕ್​ ಅನ್ನು ಹಿಂದಿ ಭಾಷೆಯಲ್ಲಿ ಎಂ.ಎಸ್​. ಧೋನಿ-ದಿ ಅನ್​ಟೋಲ್ಡ್​ ಸ್ಟೋರಿ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿತ್ತು. ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಧೋನಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

 ಈ ಚಿತ್ರ ನೋಡಿದ ಬಳಿಕ ಬಾಲ್ಯದಿಂದ ಕ್ರಿಕೆಟ್ ವೃತ್ತಿಯವರೆಗೂ ಧೋನಿ ನಡೆದುಬಂದ ಹಾದಿ ಮತ್ತಷ್ಟು ಸ್ಪಷ್ಟವಾಗಿ ತಿಳಿಯಿತು. ಈ ಸಿನಿಮಾ ಅನೇಕರಿಗೆ ಸ್ಪೂರ್ತಿ ಕೂಡ ತುಂಬಿತು. ಸದ್ಯ ಇದೇ ರೀತಿ ಈಗ ಯುವರಾಜ್ ಸಿಂಗ್​ ಅವರ ಜೀವನಾಧಾರಿತ ಚಿತ್ರ ತಯಾರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

2011ರ ವಿಶ್ವಕಪ್​ ಹೀರೋ ಯುವಿ ಪಾತ್ರದಲ್ಲಿ ಯಾವ ಚಿತ್ರರಂಗದ ಸ್ಟಾರ್​ ನಟ ನಟಿಸಬಹುದು ಎಂಬ ಪ್ರಶ್ನೆಗಳು ಇದೀಗ ಭಾರೀ ಚರ್ಚೆಯಾಗುತ್ತಿದೆ. ಒಟ್ಟಾರೆ ಯುವರಾಜ್ ಸಿಂಗ್​ ಅವರ ಬಾಲ್ಯ, ಕಷ್ಟದ ದಿನಗಳು, ಗೆಲುವಿನ ಹಾದಿ ಹೇಗಿತ್ತು ಎಂಬುದನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯತೊಡಗಿದ್ದಾರೆ.

ಚಿತ್ರಕ್ಕೆ ಇನ್ನಷ್ಟೇ ಹೆಸರು ಇಡಬೇಕಿದೆ. ಚಿತ್ರದಲ್ಲಿ ಯುವಿ ಅವರ ಕ್ರಿಕೆಟ್‌ ವೃತ್ತಿಬದುಕಿನ ಏಳು ಬೀಳುಗಳ ಬಗ್ಗೆ ಬೆಳಕು ಚೆಲ್ಲಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿರುವ ದರ್ಶನ್ ಬಿರಿಯಾನಿ ಬರುತ್ತದೆಂದು ಆಸೆ ಪಟ್ಟಿದ್ದೇ ಬಂತು