ಹರಾರೆ: ಜಿಂಬಾಬ್ವೆ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ಯುವ ಆರಂಭಿಕ ಅಭಿಷೇಕ್ ಶರ್ಮ ಯಶಸ್ಸಿನ ಹಿಂದೆ ಈ ಮಾಜಿ ಆಟಗಾರ ಇದ್ದಾರೆ.
ನಿನ್ನೆಯ ಪಂದ್ಯದಲ್ಲಿ ಅಭಿಷೇಕ್ ಸಿಕ್ಸರ್ ಗಳ ಮಳೆ ಸುರಿಸಿದ್ದರು. ಸಿಕ್ಸರ್ ಮೂಲಕವೇ ಶತಕ ದಾಖಲಿಸಿದ್ದರು. ಅದೂ ನಿರಾಸಯಾಸವಾಗಿ ಅವರು ಸಿಕ್ಸರ್ ಬಾರಿಸುವ ಕಲೆ ಸಿದ್ಧಿಸಿದ್ದಾರೆ. ಇದೆಲ್ಲದರ ಹಿಂದೆ ಭಾರತೀಯ ಕ್ರಿಕೆಟ್ ಕಂಡ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೊಡುಗೆಯೂ ಇದೆ.
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಪ್ರತಿಭೆ ಅಭಿಷೇಕ್ ಶರ್ಮ. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಬ್ಯಾಟಿಂಗ್ ಮಾಡಿ ಸುದ್ದಿಯಾಗಿದ್ದ ಅಭಿಷೇಕ್ ಗೆ ಈಗ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿದೆ. ಇದನ್ನು ಅವರು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಅವರ ಅಬ್ಬರದ ಬ್ಯಾಟಿಂಗ್ ನೋಡಿ ಅಭಿಮಾನಿಗಳು ರೋಹಿತ್ ಶರ್ಮಾ ಹೋಗಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ಮತ್ತೊಬ್ಬ ಶರ್ಮ ಎಂದು ಹೊಗಳಿದ್ದರು. ಅಭಿಷೇಕ್ ಶರ್ಮ ಕೂಡಾ ಯುವರಾಜ್ ತವರು ಪಂಜಾಬ್ ನವರು. ಅಭಿಷೇಕ್ ಗೆ ಯುವಿ ಮಾರ್ಗದರ್ಶನ ಸಿಕ್ಕಿತ್ತು. ಇದೀಗ 23 ವರ್ಷದ ಯುವ ಪ್ರತಿಭೆಗೆ ರಾಷ್ಟ್ರೀಯ ತಂಡದ ಪರ ಮಿಂಚುವ ಅವಕಾಶ ಸಿಕ್ಕಿದೆ. ನಿನ್ನೆಯ ಪಂದ್ಯದಲ್ಲಿ ಅವರು ಆಡಿದ ರೀತಿ ಗುರು ಯುವರಾಜ್ ಮೆಚ್ಚುಗೆಗೂ ಪಾತ್ರವಾಗಿದೆ.