Publish Date: Sat, 03 Feb 2018 (09:53 IST)
Updated Date: Sat, 03 Feb 2018 (09:56 IST)
ತಿರುವನಂತಪುರಂ: ಕೇರಳದಲ್ಲಿ ಕಳೆದ ವರ್ಷ ಬಹುಭಾಷಾ ನಟಿ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣ ಭಾರೀ ಸುದ್ದಿ ಮಾಡಿತ್ತು. ಇದೀಗ ಮತ್ತೊಬ್ಬ ನಟಿ ಮೇಲೆ ರೈಲಿನಲ್ಲಿ ಲೈಂಗಿಕ ಕಿರುಕುಳ ನಡೆದ ಪ್ರಕರಣ ವರದಿಯಾಗಿದೆ.
ಕಣ್ಣುರಿನಿಂದ ತಿರುವನಂತಪುರಂಗೆ ರೈಲಿನ ಎಸಿ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ಬಹುಭಾಷಾ ತಾರೆ ಸನುಶಾ ಸಂತೋಷ್ (23) ಮೇಲೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಮಲಗಿದ್ದ ನಟಿಯ ತುಟಿ ಮೇಲೆ ಕೈಯಾಡಿದಿ ದುರುಳನನ್ನು ಸ್ವತಃ ನಟಿಯೇ ಹಿಡಿದಿದ್ದಾರೆ. ತಕ್ಷಣ ಕಿರುಚಿಕೊಂಡಾಗ ಒಂದಿಬ್ಬರು ನಟಿಯ ಸಹಾಯಕ್ಕೆ ಬಂದಿದ್ದಾರೆ. ನಂತರ ರೈಲ್ವೇ ಪೊಲೀಸರ ಸಹಾಯವಾಣಿಗೆ ಕರೆ ಮಾಡಲಾಗಿದೆ. ಇದರ ಅನ್ವಯ ಆಂಟೋ ಬೋಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ