Publish Date: Sun, 13 Mar 2022 (14:09 IST)
Updated Date: Sun, 13 Mar 2022 (14:11 IST)
ಕೋಲ್ಕೊತ್ತಾ: ಬೆಂಗಾಳಿ ಟಿವಿ ನಟಿ ರೂಪಾ ದತ್ತಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಪುಸ್ತಕ ಮೇಳದಲ್ಲಿ ಮಹಿಳೆಯೊಬ್ಬರು ಸುಮಾರು ಬ್ಯಾಗ್ ಒಂದನ್ನು ಡಸ್ಟ್ ಬಿನ್ ಒಂದಕ್ಕೆ ಎಸೆಯುವ ದೃಶ್ಯ ಅಲ್ಲಿದ್ದ ಪೊಲೀಸರಿಗೆ ಕಂಡುಬಂದಿತ್ತು. ಸಂಶಯಗೊಂಡ ಪೊಲೀಸರು ಮಹಿಳೆ ಮತ್ತು ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ 75 ಸಾವಿರ ರೂ.ಗಳಷ್ಟು ಹಣವಿತ್ತು.
ವಿಚಾರಣೆ ವೇಳೆ ಮಹಿಳೆ ನಟಿ ರೂಪಾ ದತ್ತಾ ಎಂದು ಗೊತ್ತಾಗಿದ್ದು, ಆಕೆ ಪಿಕ್ ಪಾಕೆಟ್ ಮಾಡಿರುವುದು ತಿಳಿದುಬಂದಿದೆ. ಕೆಲವು ವರ್ಷಗಳ ಹಿಂದೆ ಇದೇ ನಟಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸಿ ಸುದ್ದಿಯಾಗಿದ್ದಳು.