Select Your Language

Notifications

webdunia
webdunia
webdunia
webdunia

ನಟ ಸುಶಾಂತ ಸಿಂಗ್ ಗೆಳತಿಯಿಂದ ಹೊಸ ಕೇಸ್ ದಾಖಲು

ನಟ ಸುಶಾಂತ ಸಿಂಗ್ ಗೆಳತಿಯಿಂದ ಹೊಸ ಕೇಸ್ ದಾಖಲು
ಮುಂಬೈ , ಸೋಮವಾರ, 12 ಅಕ್ಟೋಬರ್ 2020 (19:13 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಹೊಸ ಕೇಸ್ ದಾಖಲು ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತನಿಖೆಯನ್ನು 'ದಾರಿ ತಪ್ಪಿಸಲು' ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ರಿಯಾ ಚಕ್ರವರ್ತಿ ನೆರೆಹೊರೆಯವರ ವಿರುದ್ಧ ದೂರು ದಾಖಲಿಸಿದ್ದಾರೆ.

ಜೂನ್ 13 ರಂದು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ನಟಿಯನ್ನು ನೋಡಿದ್ದಾಗಿ ರಿಯಾ ಚಕ್ರವರ್ತಿ ನೆರೆಹೊರೆಯ ವಕೀಲ ಡಿಂಪಲ್ ಥವಾನಿ ಹೇಳಿಕೊಂಡಿದ್ದು, ಅವರ ವಿರುದ್ಧ ನಟಿ ರಿಯಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ತವಾನಿ "ನನ್ನ ವಿರುದ್ಧ ಸುಳ್ಳು ಮತ್ತು ನಕಲಿ ಆರೋಪಗಳನ್ನು ಮಾಡಿದ್ದಾರೆ, ಅವುಗಳು ಸುಳ್ಳಾಗಿದ್ದು ತನಿಖೆಯನ್ನು ದಾರಿ ತಪ್ಪಿಸಲು ಮಾಡಿದ ಷಡ್ಯಂತ್ರವಾಗಿದೆ" ಎಂದು ದೂರಿದ್ದಾರೆ.

ಎಸ್‌ಎಸ್‌ಆರ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ ತವಾನಿಯ ಹೇಳಿಕೆಯನ್ನು ದಾಖಲಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸನ್ನಿ ಲಿಯೋನ್ ಹಾಟ್ ಫೋಟೊ ವೈರಲ್