ಬಾಲಿವುಡ್ ನಟ ಸುಶಾಂತ ಸಿಂಗ್ ಕೇಸ್ ಗೆ ಸಂಬಂಧಪಟ್ಟಂತೆ ನಟಿ ರಿಯಾ ಪರ ವಕೀಲರು ಹೊಸ ಬಾಂಬ್ ಸಿಡಿಸಿದ್ದಾರೆ.
ಜೂನ್ 13 ರಂದು ಸುಶಾಂತ್ ಸಿಂಗ್ ರಜಪೂತ್ ನಟಿಯನ್ನು ಭೇಟಿ ಆಗೇ ಇಲ್ಲ ಎಂದಿದ್ದಾರೆ.
ರಿಯಾ ಚಕ್ರವರ್ತಿ ಪರ ವಕೀಲರು ಹೇಳಿಕೆ ನೀಡಿದ್ದು, ಇದು ಅಭಿಮಾನಿಯ ಆಧಾರರಹಿತ ವದಂತಿ ಎಂದು ಕರೆದಿದ್ದಾರೆ.
ಏತನ್ಮಧ್ಯೆ, ರಿಯಾ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನದ ಒಂದು ದಿನ ಮೊದಲು ಜೂನ್ 13 ರ ಸಂಜೆ ಭೇಟಿಯಾದ ವರದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಈ ವರದಿಗಳನ್ನು ಉದ್ದೇಶಿಸಿ ಅವರ ವಕೀಲ ಸತೀಶ್ ಮನೇಶಿಂದೆ ಹೊಸ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ರಿಯಾ ಚಕ್ರವರ್ತಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಟಿಯ ಜೀವನ ಸ್ಥೈರ್ಯ ಕುಗ್ಗಿಸಲು ಮತ್ತು ನಾಶಮಾಡಲು ಪ್ರಯತ್ನಿಸಿದ, ನಕಲಿ ಸುದ್ದಿಗಳನ್ನು ಹೊತ್ತ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಎರಡು ನಿಮಿಷಗಳ ವೈಭವಕ್ಕಾಗಿ ಊಹಾಪೋಹ ಸುದ್ದಿಗಳನ್ನು ವರದಿಮಾಡಿವೆ.
ಕೆಲವರು ಪ್ರಚಾರಕ್ಕೆ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.