Publish Date: Wed, 07 Oct 2020 (21:24 IST)
Updated Date: Wed, 07 Oct 2020 (21:41 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ಈ ನಡುವೆ ಆರೋಪಿಯಾಗಿರುವ ನಟನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗಿದೆ.
ಇದೀಗ ಸಿಬಿಐ ತನಿಖೆಯಲ್ಲಿ ಮಹತ್ವದ ವಿಷಯಗಳು ಹೊರಬಿದ್ದಿವೆ ಎನ್ನಲಾಗಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ರಿಯಾ ಚಕ್ರವರ್ತಿಗೆ ಅಂತ ಬರೋಬ್ಬರಿ 55 ಲಕ್ಷಕ್ಕಿಂತ ಹೆಚ್ಚು ರೂಪಾಯಿಗಳನ್ನು ಸುಶಾಂತ ಸಿಂಗ್ ಖರ್ಚು ಮಾಡಿದ್ದರು ಎಂಬುದು ಚರ್ಚೆಯಾಗುತ್ತಿದೆ.
ಈ ನಡುವೆ ನಟ ಸುಶಾಂತ ಸಿಂಗ್ ಗಳಿಸಿದ್ದು 70 ಕೋಟಿ ರೂ.ಗಳಿಗೆ ಹೆಚ್ಚು ಅನ್ನೋದು ತನಿಖೆ ವೇಳೆ ಪತ್ತೆಯಾಗಿದೆ ಎನ್ನಲಾಗುತ್ತಿದೆ.