Publish Date: Fri, 19 Mar 2021 (09:32 IST)
Updated Date: Fri, 19 Mar 2021 (09:34 IST)
ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು ಹಲವು ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ರಶ್ಮಿಕಾ ಮಂದಣ್ಣ ಅವರು ತಮ್ಮ ಚರ್ಮದ ರಕ್ಷಣೆ, ಆಹಾರ ಕ್ರಮ ಮುಂತಾದ ವಿಷಯಗಳ ಬಗ್ಗೆ ಅಭಿಮಾನಿಗಳ ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ರೈತ ಮಹಿಳೆಯಾಗಿ ಹೊಲ ಉಳುಮೆ ಮಾಡಿದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಮುಖಕ್ಕೆ ಮೇಕಪ್ ಹಚ್ಚಿ ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಿದ್ದ ನಟಿ ಇದೀಗ ಬಿಸಿಲಿನಲ್ಲಿ ಹೊಲ ಹೂಳುವ ಮೆಷಿನ್ ಹಿಡಿದು ಉಳುಮೆ ಮಾಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡ ನಟಿ, ಇದನ್ನು ತಾನು ತುಂಬಾ ಆನಂದಿಸಿರುವುದಾಗಿ ತಿಳಿಸಿದ್ದಾರೆ.