ಜೊತೆಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಮೇಘಾ ಶೆಟ್ಟಿ ಅವರು ಮತ್ತೇ ಕಿರುತೆರೆಗೆ ವಾಪಾಸ್ಸಾಗಿದ್ದಾರೆ. ಆದರೆ ಈ ಬಾರಿ ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ.
ಮೇಘಾ ಶೆಟ್ಟಿ ಅವರು ಜೊತೆಜೊತೆಯಲಿ ಸೀರಿಯಲ್ ಬಳಿಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ಅಲ್ಲೇ ಬ್ಯುಸಿಯಾಗಿರುವ ಅವರು ಕಿರುತೆರೆಯಲ್ಲಿ ಬಣ್ಣ ಹಚ್ಚುತ್ತಿಲ್ಲ. ಆದರೆ ನಿರ್ಮಾಪಕಿಯಾಗಿ ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿರುವ, ಹೊಸ "ಮುದ್ದುಸೊಸೆ" ಧಾರಾವಾಹಿಯನ್ನು ಮೇಘಾಶೆಟ್ಟಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ವಿಶೇಷ ಏನೆಂದರೆ ಇವರ ನಿರ್ಮಾಣದಲ್ಲಿ ಸ್ಟಾರ್ ಸುವರ್ಣದಲ್ಲಿ ಗೌರಿ ಶಂಕರ ಸೀರಿಯಲ್ ಪ್ರಸಾರವಾಗುತ್ತಿದೆ. ಗೌರಿ ಶಂಕರ್ ಸೀರಿಯಲ್ ಕತೆ ವೀಕ್ಷಕರಿಗೆ ಹತ್ತಿರವಾಗಿದ್ದು, ಒಳ್ಳೆಯ ಟಿಆರ್‌ಪಿಯೊಂದಿಗೆ ಪ್ರಸಾರವಾಗುತ್ತಿದೆ.
ಸದ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಮೇಘಾ ಶೆಟ್ಟಿ ಅವರು ಕಿರುತೆರೆಗೆ ನಾಯಕಿಯಾಗಿ ಅಲ್ಲದಿದ್ದರೂ ನಿರ್ಮಾಪಕರಾಗಿ ಮರಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ. ಹೊಸ ಕತೆಯೊಂದಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲು ಸಜ್ಜಾಗಿರುವ 'ಮುದ್ದು ಸೊಸೆ' ವೀಕ್ಷಕರ ಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.