Publish Date: Mon, 08 Mar 2021 (10:56 IST)
Updated Date: Mon, 08 Mar 2021 (10:58 IST)
ಚೆನ್ನೈ : ಉಪ್ಪೇನಾ ಚಿತ್ರದಲ್ಲಿ ನಟ ವೈಷ್ಣವ್ ತೇಜ್ ಅವರ ಜೊತೆ ನಟಿಸುವುದರ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಕೃತಿ ಶೆಟ್ಟಿ ಇದೀಗ ಕಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರಂತೆ.
ಯುವ ನಟ ರಾಮ್ ಫೊಥಿನೆನಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರದಲ್ಲಿ ನಟಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳು, ತೆಲುಗು ಭಾಷೆಯಲ್ಲಿಬಿಡುಗಡೆಯಾಗಲಿದೆ. ಇದು ಆ್ಯಕ್ಷನ್ ಚಿತ್ರವಾಗಿದ್ದು, ಲಿಂಗುಸಾಮಿ ನಿರ್ದೇಶನ ಮಾಡಲಿದ್ದಾರಂತೆ. ಶ್ರೀನಿವಾಸಾ ಸಿಲ್ವರ್ ಸ್ಕ್ರೀನ್ ಅಡಿಯಲ್ಲಿ ಚಿತ್ತೂರಿ ಶ್ರೀನಿವಾಸ್ ಅವರು ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಿದ್ದಾರೆ.