Publish Date: Sat, 10 Oct 2020 (21:27 IST)
Updated Date: Sat, 10 Oct 2020 (21:29 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಜಡ್ಜಮೆಂಟಲ್ ಜಪ ಮಾಡುತ್ತಿದ್ದಾರೆ.
ಮಾನಸಿಕ ಆರೋಗ್ಯದ ಕಥೆ ಕುರಿತಾದ ಸಿನಿಮಾದಲ್ಲಿ ನಟ ಕಂಗನಾ ರಣಾವತ್ ನಟಿಸಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದಂದು ತಾವು ಅಭಿನಯಿಸಿರುವ 'ಜಡ್ಜ್‌ಮೆಂಟಲ್ ಹೈ ಕ್ಯಾ' ಚಿತ್ರವನ್ನು ವೀಕ್ಷಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
'ಕ್ವೀನ್' ನಟಿ ಕಂಗನಾ ರಣಾವತ್, ಮಾನಸಿಕ ಆರೋಗ್ಯದ ಕುರಿತು ಸಿನಿಮಾದ ತುಣುಕನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಚಿತ್ರಕ್ಕೆ ಈ ಮೊದಲು 'ಮೆಂಟಾಲ್ ಹೈ ಕ್ಯಾ' ಎಂದು ಹೆಸರಿಡಲಾಗಿತ್ತು ಆದರೆ ಸಿಬಿಎಫ್‌ಸಿಗೆ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಬರೆದ ಪತ್ರದಿಂದಾಗಿ, ಇದು ಮಾನಸಿಕ ಅಸ್ವಸ್ಥರಿಗೆ ಅವಮಾನಕರ ಮತ್ತು ಅವಹೇಳನಕಾರಿ ಎಂದು ಅವರು ಭಾವಿಸಿದ್ದರಿಂದ, ಈ ಚಿತ್ರಕ್ಕೆ 'ಜಡ್ಜ್‌ಮೆಂಟಲ್ ಹೈ ಕ್ಯಾ' ಎಂದು ಮರುನಾಮಕರಣ ಮಾಡಲಾಯಿತು.