Publish Date: Sat, 30 Sep 2017 (07:44 IST)
Updated Date: Sat, 30 Sep 2017 (07:46 IST)
ಚೆನ್ನೈ: ಸಿನಿಮಾ ಪ್ರಚಾರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯೊಂದರ ವೇದಿಕೆಯಲ್ಲಿ ತಮಿಳಿನ ಹಿರಿಯ ನಟ ಟಿ ರಾಜೇಂದರ್ ಯುವ ನಾಯಕಿ ಧನ್ಸಿಕಾಗೆ ವೇದಿಕೆಯಲ್ಲೇ ಅವಮಾನ ಮಾಡಿದ ಘಟನೆ ನಡೆದಿದೆ.
ರಜನೀಕಾಂತ್ ಜತೆ ಕಬಾಲಿ ಸಿನಿಮಾದಲ್ಲಿ ಅಭಿನಯಿಸಿದ್ದ ನಾಯಕಿ ನಟಿ ಧನ್ಸಿಕಾ ವಿಳಿತಿರು ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಧನ್ಸಿಕಾ ಮಾತಿನ ನಡುವೆ ರಾಜೇಂದರ್ ಹೆಸರು ಹೇಳಲಿಲ್ಲ.
ಇದು ಹಿರಿಯ ನಟನನ್ನು ಸಿಟ್ಟಿಗೆಬ್ಬಿಸಿತು. ಈ ಚಿತ್ರದಲ್ಲಿ ಕೇವಲ ಒಂದು ಹಾಡಿನಲ್ಲಿ ಬಂದು ಹೋಗುವ ರಾಜೇಂದರ್ ತಕ್ಷಣ ತಮ್ಮ ಸರದಿ ಬಂದಾಗ ಧನ್ಸಿಕಾರನ್ನು ಹಿಗ್ಗಾ ಮುಗ್ಗಾ ಹೀಯಾಳಿಸಿದ್ದಾರೆ.
ತಕ್ಷಣ ಧನ್ಸಿಕಾ ಕ್ಷಮೆ ಕೇಳಲು ಮುಂದಾದಾಗ, ನನಗೆ ಸೀರೆ ಉಡದ ನಾರಿಯಿಂದ ಸಾರಿ ಬೇಕಾಗಿಲ್ಲ ಎಂದು ಅವಹೇಳನ ಮಾಡಿದ್ದಾರೆ. ಇದರಿಂದ ವೇದಿಕೆಯಲ್ಲೇ ನಟಿ ಕಣ್ಣೀರು ಸುರಿಸಿದ್ದಾರೆ. ಆದರೆ ರಾಜೇಂದರ್ ತಮ್ಮ ಹೀಯಾಳಿಕೆ ಮುಂದುವರಿಸಿದ್ದಾರೆ. ಅಚ್ಚರಿಯೆಂದರೆ ಯಾರೂ ಇವರನ್ನು ತಡೆಯಲಿಲ್ಲ. ಆದರೆ ಟ್ವಿಟರ್ ನಲ್ಲಿ ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ