Publish Date: Mon, 07 Aug 2017 (12:31 IST)
Updated Date: Mon, 07 Aug 2017 (12:33 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸದ್ಯದಲ್ಲೇ ರಾಜಕೀಯ ಸೇರುತ್ತಾರೆ ಎಂಬೆಲ್ಲಾ ಸುದ್ದಿಗಳಿಗೆ ಪುಷ್ಠಿ ನೀಡುವಂತಹ ಘಟನೆಯೊಂದು ನಡೆದಿದೆ.
ಬಿಜೆಪಿ ನಾಯಕರಾದ ಪೂನಂ ಮಹಾಜನ್ ಮತ್ತಿತರನ್ನು ರಜನೀಕಾಂತ್ ಭೇಟಿಯಾಗಿದ್ದು, ಅವರ ರಾಜಕೀಯ ನಡೆ ಬಗ್ಗೆ ಕುತೂಹಲ ಮೂಡಿಸಿದೆ.
ಸೆಪ್ಟೆಂಬರ್ ನಲ್ಲಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆಅಭಿಮಾನಿಗಳಿಗೆ ತಿಳಿಸುವುದಾಗಿ ರಜನೀಕಾಂತ್ ಹಿಂದೆ ಹೇಳಿದ್ದರು. ಅದಕ್ಕೆ ಪೂರ್ವಭಾವಿಯಾಗಿಯೇನೋ ಎಂಬಂತೆ ಬಿಜೆಪಿ ನಾಯಕರೊಂದಿಗಿನ ಭೇಟಿ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.