Publish Date: Mon, 07 Aug 2017 (12:21 IST)
Updated Date: Mon, 07 Aug 2017 (12:24 IST)
ಬೆಂಗಳೂರು: ನೂತನವಾಗಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ವೆಂಕಯ್ಯನಾಯ್ಡು ಆಯ್ಕೆ ಕುರಿತಂತೆ ನಟ ಜಗ್ಗೇಶ್ ಮಾಡಿರುವ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ.
ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಲ್ಲಿ ಭಾಷಾ ಭಾವನೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಆಕ್ಷೇಪಿಸಿದರು. ಆದರೆ ಇಂದು ಅವರು ಉಪರಾಷ್ಟ್ರಪತಿಯಾದರು. ಅಂದು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದ್ದರೆ, ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗುತ್ತಿತ್ತು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಭಾರೀ ವಿವಾದಕ್ಕೆ ಈಡಾಗುತ್ತಿದ್ದಂತೆ ಜಗ್ಗೇಶ್ ಈ ಟ್ವೀಟ್ ನ್ನು ತಮ್ಮ ವಾಲ್ ನಿಂದ ಅಳಿಸಿ ಹಾಕಿದ್ದಾರೆ.