Select Your Language

Notifications

webdunia
webdunia
webdunia
webdunia

Actor Vishal: ವೇದಿಕೆಯಲ್ಲಿ ಮಂಗಳಮುಖಿಯರು ಹರಸುತ್ತಿರುವಾಗಲೇ ನಟ ವಿಶಾಲ್‌ಗೆ ಹೀಗಾಗುದ, Video Viral

ನಟ ವಿಶಾಲ್

Sampriya

ತಮಿಳುನಾಡು , ಸೋಮವಾರ, 12 ಮೇ 2025 (14:33 IST)
Photo Credit X
ತಮಿಳು ಚಿತ್ರರಂಗದಲ್ಲಿ ಕೇವಲ ವಿಶಾಲ್ ಎಂದೇ ಖ್ಯಾತಿಗಳಿಸಿರುವ ವಿಶಾಲ್ ಕೃಷ್ಣಾ ರೆಡ್ಡಿ ಅವರು ಭಾನುವಾರ ತಮಿಳುನಾಡಿನ ವಿಲ್ಲುಪುರಂನಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದ ಘಟನೆ ನಡೆದಿದೆ.

ಈ ಹಿಂದೆಯೂ ವಿಶಾಲ್ ಅವರ ಆರೋಗ್ಯದಲ್ಲಿ ಏರಪೇರಾಗಿತ್ತು.  ಇದೀಗ ವೇದಿಕೆಯಲ್ಲೇ ಕುಸಿದ ಬಿದ್ದಿದ್ದರಿಂದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು/ ಇದೀವಗ ಸಿಕ್ಕ ಮಾಹಿತಿ ಪ್ರಕಾರ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಬಹು ವರದಿಗಳ ಪ್ರಕಾರ, ವಿಶಾಲ್ ಭಾನುವಾರ ವಿಲ್ಲಿಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ವೀಡಿಯೊಗಳು ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದನ್ನು ತೋರಿಸುತ್ತವೆ.
ಟೈಮ್ಸ್ ನೌ ಪ್ರಕಾರ, ನಟ ಅವರು ಈವೆಂಟ್‌ನಲ್ಲಿ ವೇದಿಕೆಯಲ್ಲಿದ್ದರು, ಅವರು ಕುಸಿದು ಬಿದ್ದು  ಮೂರ್ಛೆ ಹೋಗಿದ್ದರು.

ಸೋಮವಾರ, ವಿಶಾಲ್ ಅವರ ತಂಡವು ಅವರ ಆರೋಗ್ಯದ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ನಟ ವಿಶಾಲ್ ಅವರ ಆರೋಗ್ಯದ ಬಗ್ಗೆ ಇತ್ತೀಚಿನ ವರದಿಗಳನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ತೃತೀಯಲಿಂಗಿ ಸಮುದಾಯ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಾಗ, # ವಿಶಾಲ್ ಸ್ವಲ್ಪ ಸಮಯದ ಆಯಾಸವನ್ನು ಅನುಭವಿಸಿದರು ಮತ್ತು ಪ್ರಜ್ಞೆ ತಪ್ಪಿದರು. ಅವರು ಮಧ್ಯಾಹ್ನದ ಸಾಮಾನ್ಯ ಊಟವನ್ನು ಬಿಟ್ಟು, ಕೇವಲ ಜ್ಯೂಸ್ ಸೇವಿಸಿದ್ದಾರೆ ಎಂದು ನಂತರ ದೃಢಪಡಿಸಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

Actor Vishal: ವೇದಿಕೆಯಲ್ಲಿ ಕುಸಿದು ಬಿದ್ದ ನಟ ವಿಶಾಲ್