Publish Date: Thu, 03 Dec 2020 (11:15 IST)
Updated Date: Thu, 03 Dec 2020 (11:19 IST)
ಚೆನ್ನೈ : ವಿಜಯ್ ತಮಿಳು ಚಿತ್ರರಂಗದ ಖ್ಯಾತ ನಟ. ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಅಭಿಮಾನಿಗಳಿಗೆ ಸೂಪರ್ ಹಿಟ್ ಸಿನಿಮಾಗಳು ನೀಡಿದ್ದಾರೆ.
ಇಂತಹ ಮಹಾನ್ ನಟ ವಿಜಯ್ ಸಿನಿಮಾ ಜೀವನವನ್ನು ಆರಂಭಿಸಿ 28 ವರ್ಷಗಳಾಗಿದೆ. ಹಾಗಾಗಿ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮೀಯ ಪ್ರಯಾಣದ 28ನೇ ವಾರ್ಷಿಕೋತ್ಸವವನ್ನು ವಿಶೇಷವಾದ ಪೋಸ್ಟರ್ 28ನೇ ಇಯರ್ ಆಫ್ ಥಲಪತಿ ಎಂದು ರಚಿಸುವುದರ ಮೂಲಕ ಸಂಭ್ರಮವನ್ನು ಆಚರಿಸುತ್ತಿದ್ದಾರೆ.
ಈ ನಡುವೆ ನಟ ವಿಜಯ್ ಇದೀಗ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮಾಸ್ಟರ್ ಚಿತ್ರದಲ್ಲಿ ನಟಿಸಿರುವ ಮಹೇಂದ್ರನ್ ಈ ವಿಚಾರವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.