ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ಈ ನಡುವೆ ಬಾಲಿವುಡ್ ಡ್ರಗ್ ಲಿಂಕ್ ಜೋರಾಗಿ ಸದ್ದು ಮಾಡುತ್ತಿದ್ದು, ಇದರಿಂದ ಸುಶಾಂತ್ ಕೇಸ್ ತನಿಖೆ ವಿಳಂಬವಾಗುತ್ತಿದೆ ಎಂದು ನಟನ ಕುಟುಂಬದವರು, ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದ್ದರು.
ಈ ನಡುವೆ ಸಿಬಿಐ ಹೊಸ ಹೇಳಿಕೆ ಬಿಡುಗಡೆ ಮಾಡಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಯಾವುದೇ ಅಂಶವನ್ನು ತಳ್ಳಿಹಾಕಲಾಗಿಲ್ಲ' ಎಂದು ಹೇಳಲಾಗಿದೆ.
ಸುಶಾಂತ್ ಸಿಂಗ್ ಕೇಸ್ ನಲ್ಲಿ ಸಿಬಿಐ ಈವರೆಗೆ ಯಾವುದೇ ಆರೋಪ, ವಿಷಯವನ್ನು ತಳ್ಳಿಹಾಕಿಲ್ಲ ಎಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಕೇಂದ್ರ ತನಿಖಾ ದಳವು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ವೃತ್ತಿಪರ ತನಿಖೆಯನ್ನು ನಡೆಸುತ್ತಿದೆ. ಇದರಲ್ಲಿ ಎಲ್ಲಾ ಅಂಶಗಳನ್ನು ಗಮನಿಸಲಾಗುತ್ತಿದೆ ಮತ್ತು ಯಾವುದೇ ಅಂಶವನ್ನು ಇಲ್ಲಿಯವರೆಗೆ ತಳ್ಳಿಹಾಕಲಾಗಿಲ್ಲ. ತನಿಖೆ ಮುಂದುವರೆದಿದೆ ಎಂದು ಸಿಬಿಐ ತಿಳಿಸಿದೆ.