ಚೆನ್ನೈ : ಸೂರ್ಯ ಅವರು ತಮಿಳಿನ ಖ್ಯಾತ ನಟರಲ್ಲಿ ಒಬ್ಬರು. ಇವರು ತಮ್ಮ ವೃತ್ತಿ ಜೀವದಲ್ಲಿ ಅತಿ ಎತ್ತರಕ್ಕೆ ಏರಿದ್ದಾರೆ. ಇದೀಗ ಅವರು ತಮ್ಮ ನಟನೆಯ ಚಿತ್ರವನ್ನು ನೋಡಿ ನಾಚಿಕೆ ಪಡುತ್ತಿದ್ದಾರೆ.
ಹೌದು. ನಟ ಸೂರ್ಯ ಅವರ ಅಭಿನಯದ ಸೂರರೈ ಪೊಟ್ರು ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಚಿತ್ರ ಭಾರೀ ಯಶಸ್ಸು ಕಂಡಿತ್ತು. ಆದರೆ ಸೂರ್ಯ ಅವರು ಮಾತ್ರ ತಮ್ಮ ಚಿತ್ರವನ್ನು ನೋಡಿ ನಾಚಿಕೆಪಟ್ಟುಕೊಳ್ಳುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ.
ಯಾಕೆಂದರೆ ಜೀವನದಲ್ಲಿ ಸಾಧಿಸುವ ಚಲವಿಟ್ಟುಕೊಂಡ ಸೂರ್ಯ ಅವರು ಅದರಲ್ಲಿರುವ ನ್ಯೂನತೆಯನ್ನು ನೋಡಿ ಭಯವಾಗುತ್ತದೆಯಂತೆ. ತಾನು ಅತ್ಯುತ್ತಮವಾದುದ್ದನ್ನು ನೀಡಲಿಲ್ಲ ಎಂದು ಅನಿಸುತ್ತಿದೆಯಂತೆ. ತಾನು ಇನ್ನಷ್ಟು ಸುಧಾರಿಸಬೇಕು ಎಂದೆನಿಸುತ್ತಿದೆಯಂತೆ.