Select Your Language

Notifications

webdunia
webdunia
webdunia
webdunia

ಭೂಗತ ದೊರೆ ದಾವೊದ್ ಗ್ಯಾಂಗ್ ಜೊತೆ ಊಟ ಮಾಡಿದ ಆರ್ ಜಿವಿ

ಭೂಗತ ದೊರೆ ದಾವೊದ್ ಗ್ಯಾಂಗ್ ಜೊತೆ ಊಟ ಮಾಡಿದ ಆರ್ ಜಿವಿ
ಹೈದರಾಬಾದ್ , ಮಂಗಳವಾರ, 2 ಫೆಬ್ರವರಿ 2021 (10:00 IST)
ಹೈದರಾಬಾದ್ : ವಿವಾದಾತ್ಮಕ ನಿರ್ದೇಶಕರೆಂದೇ ಪ್ರಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರು ಕೆಲವರ ನೈಜ ಜೀವನದ ಕಥೆಗಳನ್ನು ಚಿತ್ರ ಮಾಡಲು ಹೋಗಿ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅವರು ಭೂಗತ ದೊರೆ ದಾವೊದ್ ಜೀವನಚರಿತ್ರೆ ‘ಡಿ ಕಂಪೆನಿ ‘ ಚಿತ್ರ ಮಾಡಲು ಹೊರಟಿದ್ದಾರೆ.

ಭೂಗತ ಜಗತ್ತನ್ನು ಆಳಲು ದಾವೊದ್ ಇಬ್ರಾಹಿಂ ಸಣ್ಣ ಗ್ಯಾಂಗ್ ನಾಯಕನಿಂದ ದೊಡ್ಡ ದರೋಡೆಕೋರನಾಗಿ ಹೇಗೆ ಬೆಳೆದ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ನಡುವೆ ಆರ್ ಜಿವಿ ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ಪೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ  ಅವರು ದಾವೊದ್ ಗ್ಯಾಂಗ್ ಜೊತೆ ಊಟ ಮಾಡುತ್ತಿದ್ದರು. ಇದು ತಮ್ಮ ಕನಸಿನ ಚಿತ್ರವೆಂದು ಅವರು ಘೋಷಿಸಿದ್ದಾರೆ. ಈ ಚಿತ್ರ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ‘ಆಚಾರ್ಯ’ ಚಿತ್ರದಲ್ಲಿ ನಟಿಸಲಿದ್ದಾರಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ