ಚೆನ್ನೈ: ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಲ್ಲಿ ಕೆಳವರ್ಗದ ಬಡ ಕಾರ್ಮಿಕ ರಾಜಕಣ್ಣು ಎಂಬಾತ ಲಾಕಪ್ ಡೆತ್ ಗೆ ನ್ಯಾಯ ಒದಗಿಸುವ ಕತೆಯಿದೆ. ಇದೀಗ ನಟ ಸೂರ್ಯ ಅದೇ ಮಾನವೀಯತೆಯನ್ನು ನಿಜ ಜೀವನದಲ್ಲೂ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜೈ ಭೀಮ್ ಸಿನಿಮಾ 1990 ರಲ್ಲಿ ನಡೆದ ರಾಜಾಕಣ್ಣು ಲಾಕಪ್ ಡೆತ್ ಘಟನೆಯಾಧಾರಿತ ಸಿನಿಮಾವಾಗಿದೆ. ನಿಜ ಜೀವನದಲ್ಲಿ ರಾಜಾಕಣ್ಣು ಪತ್ನಿ ಪಾರ್ವತಿ ಈಗಲೂ ದೈನಂದಿನ ಬದುಕಿಗೆ ಕಷ್ಟಪಡುತ್ತಿದ್ದಾಳೆ. ಇದನ್ನು ಅರಿತ ಸೂರ್ಯ ಈಗ ಆಕೆಯ ಹೆಸರಿಗೆ 10 ಲಕ್ಷ ರೂ. ಡೆಪಾಸಿಟ್ ಮಾಡಿ ಸಹಾಯ ಮಾಡಿದ್ದಾರೆ.
10 ಲಕ್ಷ ರೂ. ಡೆಪಾಸಿಟ್ ನ ಬಡ್ಡಿ ಹಣ ಆಕೆಗೆ ಸಿಗುವಂತೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಣವನ್ನು ಆಕೆಯ ನಂತರ ತಲೆಮಾರು ಕೂಡಾ ಬಳಸುವಂತೆ ಸಹಾಯ ಮಾಡಿದ್ದಾರೆ. ನಿಜ ಜೀವನದಲ್ಲೂ ಸೂರ್ಯ ಈ ಮೂಲಕ ಹೀರೋ ಎನಿಸಿಕೊಂಡಿದ್ದಾರೆ.