ಕೊಚ್ಚಿ: ಮಲಯಾಳಂನ ಸ್ಟಾರ್ ನಟ ಕುಂಜಾಕೋ ಬೋಬನ್ ಗೆ ಈಗ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್ ಕೆಲಸ ಸಿಕ್ಕಿದೆ. ಇದನ್ನು ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ!
ಕರ್ನಾಟಕದ ಶಾಲಾ ಪಠ್ಯ ಪುಸ್ತಕವೊಂದರಲ್ಲಿ ಪೋಸ್ಟ್ ಮ್ಯಾನ್ ವೃತ್ತಿಯನ್ನು ಬಿಂಬಿಸುವ ಚಿತ್ರದಲ್ಲಿ ಕುಂಜಾಕೋ ಬೋಬನ್ ಫೋಟೋ ಬಳಸಲಾಗಿದೆ. ಕೆಳಗೆ ಪೋಸ್ಟ್ ಮ್ಯಾನ್ ಎಂದು ಬರೆಯಲಾಗಿದೆ.
ಈ ಫೋಟೋವನ್ನು ಶೇರ್ ಮಾಡಿರುವ ಕುಂಜಾಕೋ ಬೋಬನ್ ನನಗೆ ಕೊನೆಗೂ ಕರ್ನಾಟಕದಲ್ಲಿ ಸರ್ಕಾರಿ ಕೆಲಸ ಸಿಕ್ಕಿತು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.