ಮೈಸೂರು: ನಟ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಮದುವೆಯ ವಿಧಿ ವಿಧಾನಗಳು ಅದ್ಧೂರಿಯಾಗಿ ನಡೆಯುತ್ತಿದೆ.ನಿನ್ನೆ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಇಂದು ಮೈಸೂರಿನಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಶಾಸ್ತ್ರವೊಂದರಲ್ಲಿ ಪತ್ನಿ ತನ್ನ ಕಾಲಿಗೆ ಬೀಳೋದು ಬೇಡ ಎಂದು ಧನಂಜಯ್ ಹಠ ಹಿಡಿದಿದ್ದಾರೆ.
ಕಾಲುಂಗುರು ತೊಡಿಸಿದ ಬಳಿಕ ಧನ್ಯತಾ ಅವರನ್ನು ಧನಂಜಯ್ ಕಾಲಿಗೆ ನಮಸ್ಕರಿಸುವಂತೆ ಪುರೋಹಿತರು ಹೇಳುತ್ತಾರೆ. ಆದರೆ ಧನಂಜಯ್ ತನ್ನ ಕಾಲಿಗೆ ಪತ್ನಿ ನಮಸ್ಕರಿಸುವುದು ಬೇಡ ಎಂದು ಹಠ ಹಿಡಿಯುತ್ತಾರೆ. ಆದರೆ ಕುಟುಂಬುದವರ ಒತ್ತಾಯದ ಮೇರೆಗೆ ಧನಂಜಯ್ ಸುಮ್ಮನಾಗುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು, ನಮ್ಮ ಧನಂಜಯ್ ಅವರದ್ದು ಎಂಥ ಸಂಸ್ಕಾರ ಎಂದು ಕೊಂಡಾಡಿದ್ದಾರೆ.