ಬೆಂಗಳೂರು: ಕನ್ನಡ ಭಾಷೆ ಹಾಗೂ ಕನ್ನಡ ಫಿಲ್ಮ್ ಇಂಡಸ್ಟ್ರಿ ಬಗ್ಗೆ ಮಾತನಾಡಲು ಹಿಂಜರಿಯುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈ ವಿಚಾರವಾಗಿ ಮತ್ತೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಶ್ಮಿಕಾ ಅವರು 'ನಾನು ಹೈದರಾಬಾದ್ನವಳು' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಶ್ಮಿಕಾ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಇದನ್ನು ಅನೇಕರು ಟ್ರೋಲ್ ಮಾಡಿದ್ದಾರೆ.
ಪುಪ್ಪ 2 ಸಕ್ಸಸ್ ಬಳಿಕ ಇದೀಗ ರಶ್ಮಿಕಾ ಮಂದಣ್ಣ ಅವರು 'ಛಾವಾ' ಸಿನಿಮಾದಲ್ಲಿ ವಿಕ್ಕಿ ಕೌಶಲ್ ಜೊತೆ ನಟಿಸಿದ್ದಾರೆ. ಇಂದು ಈ ಸಿನಿಮಾ ಬಿಡುಗಡೆಗೊಂಡಿದ್ದು, ಚಿತ್ರದ ಈವೆಂಟ್‌ವೊಂದರಲ್ಲಿ ನಾನು ಹೈದರಾಬಾದ್ನವಳು ಎಂದಿರುವುದು ಅನೇಕರ ಕೋಪಕ್ಕೆ ಕಾರಣವಾಗಿದೆ.
ವೇದಿಕೆಯಲ್ಲಿ ಮಾತನಾಡುತ್ತಾ ರಶ್ಮಿಕಾ, ನಾನು ಹೈದರಾಬಾದ್ನವಳು. ನಾನು ಅಲ್ಲಿಂದ ಒಬ್ಬಂಟಿಯಾಗಿ ಬಂದಿದ್ದೇನೆ. ಬಹುಶಃ ನಾನು ಈಗ ನಿಮ್ಮ ಕುಟುಂಬದ ಭಾಗ ಆಗಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.
ಇದಕ್ಕೆ ಕೆಲವರು ರಶ್ಮಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ. ರಶ್ಮಿಕಾ ಯಾವಾಗ ಹೈದರಾಬಾದ್ನವರಾದರು? ಇದನ್ನು ಜನನ ಪ್ರಮಾಣಪತ್ರದಲ್ಲಿ ಸೇರಿಸಿದ್ದಾರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಪ್ರೀತಿಗಾಗಿ ಊರನ್ನೇ ಮರೆತ ರಶ್ಮಿಕಾ ಎಂದು ಕೆಲವರು ಹೇಳಿದ್ದಾರೆ.
ನಿಮ್ಮನ್ನು ದ್ವೇಷಿಸಲು ನಿತ್ಯ ಹೊಸ ಹೊಸ ಕಾರಣ ನೀಡುತ್ತೀರಿ ಎಂದು ಕೆಲವರು ಹೇಳಿದ್ದಾರೆ. ಕೂರ್ಗ್ ನವರಾದ ನೀವು ನಿಮ್ಮ ಮೂಲ ಮರೆತಿದ್ದೀರಿ. ನಿಮಗೆ ಗೌರವ ಪಡೆದು ಕೊಳ್ಳುವ ಅರ್ಹತೆಯಿಲ್ಲ, ನಿಮಗೆ ನೈತಿಕತೆಯಿಲ್ಲ, ನಾಚಿಕೆಯಾಗಬೇಕು ಎಂದು ನೆಟಿಜನ್ ಒಬ್ಬರು ಕಮೆಂಟ್ ಮಾಡಿದ್ದಾರೆ.